Saturday, February 4, 2023

Latest Posts

ಸಿದ್ದರಾಮಯ್ಯ ಹಿಂದೂ ವಿರೋಧಿ ಎನ್ನೋದು ಸ್ಪಷ್ಟ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಹೊಸದಿಗಂತ ವರದಿ ಹುಬ್ಬಳ್ಳಿ:

ಗೌರಿ ಲಂಕೇಶ ಹತ್ಯೆಯನ್ನು ಸನಾತನ ಧರ್ಮದವರು ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದು ನೋಡಿದರೆ ಅವರು ಹಿಂದೂ ವಿರೋಧಿ ಎಂಬುದು ಸ್ಪಷ್ಟವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸನಾತನ ಧರ್ಮ ವೆಂದರೆ ಸಾಕ್ಷಿ ಆಧಾರ ಪ್ರಕಾರ ಹಿಂದೂ ಧರ್ಮವಾಗಿದೆ. ಅವರ ಈ ಹೇಳಿಕೆಯಿಂದ ಹಿಂದೂ ವಿರೋಧಿ ಮನಸ್ಥಿತಿ ಇರುವುದು ಗೊತ್ತಾಗುತ್ತದೆ ಎಂದರು.

ಸನಾತನ ಧರ್ಮಕ್ಕೆ ಅಗಾಧವಾದ ಅರ್ಥವಿದೆ. ವಿಶ್ವಾದ್ಯಾಂತ ಸನಾತನ ಧರ್ಮ ಅಧ್ಯಯನ ಹಾಗೂ ಸ್ವೀಕರಿಸಲು ಲಕ್ಷಾಂತರ ಜನರು ಭಾರತಕ್ಕೆ ಬರುತ್ತಾರೆ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನವರು ಹಿಂದೂ ವಿರೋಧಿ ಹಾಗೂ ದ್ವೇಷಿಯನ್ನಲು ಎಲ್ಲ ಉದಾಹರಣೆಗಳು ಇದಕ್ಕೆ ಸಾಕ್ಷಿಯಾಗಿವೆ ಎಂದರು.

ಪಾಟ್ಲಾ ಹೌಸ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಮೃತ ಪಟ್ಟಿದ್ದು, ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರಿಗೆ ದುಃಖವಾಗಲಿಲ್ಲ. ಅವರಿಗೆ ದುಃಖವಾಗಿದ್ದು, ಅಲ್ಲಿದ್ದ ಭಯೋತ್ಪಾದಕ ಮೃತಪಟ್ಟಿದ್ದರಿಂದ ಎಂದು ಆರೋಪಿಸಿದರು.

ಕಸಬಿಗೆ ಬಿರಾಯಾನಿ ತಿನಿಸಿದವರು ಇವತ್ತು. ಪಾಕಿಸ್ತಾನಕ್ಕೆ ಹೋಗಿ ಪ್ರಧಾನಿ ಮೋದಿ ಸೋಲಿಸಲು ಸಹಕಾರ ನೀಡಿದ ಪಕ್ಷ ಕಾಂಗ್ರೆಸ್. ಇವತ್ತು ಹಿಂದೂಗಳ ಬಗ್ಗೆ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ದೇವಾಲಯಗಳಿಗೆ ಭೇಟಿ ಮಾಡಿ ವಿಭೂತಿ ಹಾಗೂ ಕುಂಕುಮ ಧರಿಸಿ ನಾಟಕವಾಡುತ್ತಾರೆ ತಾಕತ್ತಿದ್ದರೇ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸವಾಲ ಹಾಕಿದರು.

ಹಿಂದೂ ಹಾಗೂ ಹಿಂದೂತ್ವಕ್ಕೆ ವ್ಯತ್ಯಾಸವೇ ಇಲ್ಲ. ಹಿಂದೂತ್ವ ವೆಂದರೆ ಹಿಂದೂಗಳ ಜೀವನ ಪದ್ಧತಿಯಾಗಿದೆ. ಮುಸ್ಲಿಮರನ್ನು ತೃಷ್ಟಿಕರಣಗೊಳಿಸುತ್ತಿದ್ದಾರೆ. ಬಿಜೆಪಿಯನ್ನು ವಿರೋಧಿಸುವ ಬರದಲ್ಲಿ ಹಿಂದೂತ್ವ ವಿರೋಧ ಮಾಡುತ್ತಿದ್ದು, ಬರುವ ದಿನಗಳಲ್ಲಿ ಜನ ತಕ್ಕು ಪಾಠ ಕಲಿಸುತ್ತಾರೆ ಎಂದರು.

ರಾಮಮಂದಿರ ರಾಜಕೀಯವಾಗಿ ಬಳಸಿದವರು ಕಾಂಗ್ರೆಸ್ ನವರು. ಮಂದಿರಕ್ಕೆ ಬೀಗ ಹಾಕಿದ್ದರು. ಮಂದಿರಕ್ಕೆ ಹೋದ ಭಕ್ತರ ಮೇಲೆ ಗೋಲಿಬಾರ ಮಾಡಿದ್ದಾರೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!