MUST READ | ನಿರೀಕ್ಷೆಗಳು ಹುಸಿಯಾಗಿ ನಿರಾಸೆಯಾಗೋದು ಸಾಮಾನ್ಯ, ಇದರಿಂದ ಹೊರಬರೋದು ಹೇಗೆ?

ಕೆಲವೊಮ್ಮೆ ಜೀವನದಲ್ಲಿ ಎಲ್ಲವೂ ನೀವಂದುಕೊಂಡಂತೆ ಆಗೋದಿಲ್ಲ, ಕೆಲವೊಮ್ಮ ಅಲ್ಲ ಹಲವೊಮ್ಮೆ ಅಂದುಕೊಂಡಂತೆ ಬದುಕು ಇರೋದಿಲ್ಲ, ಹಾಗಂತ ಇರುವ ಲೈಫ್‌ನ್ನು ಬಿಟ್ಟು ಎಲ್ಲಿಗೆ ಎಸ್ಕೇಪ್ ಆಗ್ತೀರಿ? ಆದ್ರೂ ಮತ್ತೆ ಬರಲೇ ಬೇಕಲ್ಲಾ? ನಿರಾಸೆಯಾದಾಗ ನಿಮ್ಮನ್ನು ನೀವು ಹೀಗೆ ಸಂಭಾಳಿಸಿ..

  • ಎಲ್ಲಕ್ಕಿಂತ ಮುಖ್ಯವಾಗಿ ಸಂದರ್ಭಕ್ಕೆ ಸಮಯ ನೀಡಿ, ಕೆಲಸದಲ್ಲಿ ಜಗಳ, ಮನೆಯಲ್ಲಿ ಕಲಹ, ನೀವು ಅಂದುಕೊಂಡ ವಿಷಯ ಆಗದೇ ಇರುವಾಗ ಆ ಸಂದರ್ಭಕ್ಕೆ ಸಮಯ ನೀಡಿ. ಆಗಿದ್ದು ಆಗಿದೆ, ಇನ್ನು ಏನು ಮಾಡಲೂ ಆಗದು ಎಂದು ಒಪ್ಪಿ ಸುಮ್ಮನಾಗಿ.
  • ಬೇರೆ ಯಾವ ವಿಷಯದ ಮೇಲೆ ಗಮನ ಹರಿಸಿದರೆ ಒಳ್ಳೆಯದು ನೋಡಿ, ಈಗ ಆಫೀಸ್‌ನಲ್ಲಿ ಇನ್‌ಕ್ರೀಮೆಂಟ್‌ಗಾಗಿ ನೀವು ಕಾಯುತ್ತಿದ್ದು ಅದು ಆಗೋದಿಲ್ಲ ಎಂದಾದರೆ ಬೇರೆ ಕೆಲಸ ನೋಡಿ ಅಥವಾ ಪಾರ್ಟ್ ಟೈಂ ಕೆಲಸ ನೋಡಿ. ಸಂಬಂಧಗಳಲ್ಲಿ ನಿರೀಕ್ಷೆ ಹುಸಿಯಾದಾಗ ನಿಮ್ಮ ಜೀವದಲ್ಲಿ ಆ ವ್ಯಕ್ತಿಯಿಂದ ಆದ ಒಳ್ಳೆ ಘಟನೆಗಳನ್ನು ನೆನೆದು ಕೆಟ್ಟದ್ದನ್ನು ಅಲ್ಲಿಗೇ ಬಿಟ್ಟುಬಿಡಿ.
  • ನಿಮ್ಮ ನಿರೀಕ್ಷೆಯಲ್ಲೇ ದೋಷ ಇದೆಯಾ? ಯೋಚಿಸಿ ಸಾಧ್ಯವೇ ಇಲ್ಲ ಎನ್ನುವಂಥದ್ದನ್ನು ನಿರೀಕ್ಷೆ ಮಾಡಿಕೊಂಡು ಕೂತಿದ್ದೀರಾ? ಅದೇ ನಿಜವಾದರೆ ನಿಮ್ಮ ನಿರೀಕ್ಷೆಯನ್ನೇ ಬದಲಾಯಿಸಿ.
  • ನಿಮ್ಮ ನಿರೀಕ್ಷೆ ಹುಸಿಯಾದಾಗ ಈ ನೋವು ನಿಮ್ಮ ಆರೋಗ್ಯಕ್ಕೆ ಹಾನಿಯಾಗದಂತೆ ನೋಡಿಕೊಳ್ಳಿ. ಈ ಸಮಯ ಹೋಗಿಬಿಡುತ್ತದೆ ಆದರೆ ಈ ಸಮಯದಲ್ಲಿ ದೇಹಕ್ಕೆ ಮಾಡಿಕೊಂಡ ಹಾನಿ ಹೋಗೋದಿಲ್ಲ.
  • ನಿಮ್ಮ ಮೇಲೆ ಕರುಣೆ ಇಡಿ, ನೀವು ಇನ್ನೂ ಬೆಟರ್ ಆಗೋದು ಹೇಗೆ ಯೋಚಿಸಿ. ಮಾನಸಿಕ ಆರೋಗ್ಯ ಹತೋಟಿಯಲ್ಲಿರಲಿ.
  • ಈ ರೀತಿ ನಿರೀಕ್ಷೆ ಹುಸಿಯಾಗಿದ್ದೂ ಖುಷಿಯಾಗಿರೋ ಜನರ ಜೊತೆ ಸಮಯ ಕಳೆಯಿರಿ, ಇದು ಜೀವನದ ಹೊಸ ಪರ್ಸೆಪ್ಷನ್ ನೀಡುತ್ತದೆ.
  • ಇದೊಂದು ಕಲಿಕೆ ಎಂದು ಸುಮ್ಮನಾಗಿ, ಸಮಯ ನೀಡಿ ಮತ್ತೆ ಮುಂದೆ ಬನ್ನಿ

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!