ಸತತ ನಾಲ್ಕನೇ ವಾರವೂ ಕುಸಿದ ಭಾರತದ ವಿದೇಶಿ ವಿನಿಮಯ ಸಂಗ್ರಹ: 325 ಮಿಲಿಯನ್‌ ಡಾಲರ್‌ ಇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ವಿದೇಶಿ ವಿನಿಮಯ ಸಂಗ್ರಹವು ಸತತವಾಗಿ 4 ನೇ ವಾರವೂ ಕುಸಿತ ದಾಖಲಿಸಿದ್ದು 560.942 ಶತಕೋಟಿ ಡಾಲರ್‌ ಗೆ ಕುಸಿದಿದೆ. ಆರ್‌ಬಿಐ ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಫೆಬ್ರವರಿ 24 ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 325 ಮಿಲಿಯನ್‌ ಡಾಲರ್‌ ಇಳಿಕೆಯಾಗಿದೆ. ಹಿಂದಿನ ವಾರದಲ್ಲಿ ಫಾರೆಕ್ಸ್ ಸಂಗ್ರಹವು 5.68 ಶತಕೋಟಿ ಡಾಲರ್‌ ಇಳಿದು 561.267 ಶತಕೋಟಿ ಡಾಲರ್‌ ಗಳಷ್ಟಾಗಿತ್ತು.

2021ರ ಅಕ್ಟೋಬರ್‌ ತಿಂಗಳಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು ದಾಖಲೆಯ 645 ಬಿಲಿಯನ್ ಡಾಲರ್‌ ಗೆ ತಲುಪಿತ್ತು. ಆದರೆ ಜಾಗತಿಕ ಆರ್ಥಿಕ ಪರಿಸ್ಥಿತಿಯ ಒತ್ತಡಗಳ ನಡುವೆ ರುಪಾಯಿ ಕುಸಿತವನ್ನು ಕಡಿಮೆ ಮಾಡಲು ಕೇಂದ್ರೀಯ ಬ್ಯಾಂಕ್ ವಿದೇಶಿ ಕರೆನ್ಸಿಗಳನ್ನು ಮಾರಾಟ ಮಾಡುತ್ತಿರುವುದರಿಂದ ಈ ಸಂಗ್ರಹವು ಕುಸಿಯುತ್ತಿದೆ.

ಚಿನ್ನ ಸಂಗ್ರಹವೂ ಕೂಡ ಸತತ ನಾಲ್ಕನೇ ವಾರ ಕಡಿಮೆಯಾಗಿದ್ದು 66 ಮಿಲಿಯನ್‌ ಡಾಲರ್‌ ಕುಸಿದು 41.751 ಬಿಲಿಯನ್‌ ಡಾಲರ್‌ ಗಳ ಮಟ್ಟಕ್ಕೆ ತಲುಪಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!