ಒಬ್ಬರೊಬ್ಬರನ್ನು ಬಿಟ್ಟಿರೋದು ಕಷ್ಟ ಎಂದು ಒಬ್ಬನನ್ನೇ ಮದುವೆಯಾದ ಅವಳಿ ಸಹೋದರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಐಟಿ ಇಂಜಿನಿಯರ್ ಅವಳಿ ಸಹೋದರಿಯಿಬ್ಬರು ಸೇರಿ ಒಂದೇ ವ್ಯಕ್ತಿಯನ್ನು ಮದುವೆಯಾದ ಸನ್ನಿವೇಶ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಲ್ಶಿರಾಸ್ ತಾಲೂಕಿನ ಅಕ್ಲುಜ್‍ನಲ್ಲಿ ನಡೆದಿದೆ.

ಪಿಂಕಿ ಮತ್ತು ರಿಂಕಿ ಐಟಿ ಇಂಜಿನಿಯರ್‌ಗಳಾಗಿದ್ದು, ಪ್ರಸ್ತುತ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಇಬ್ಬರು ಅ ಒಬ್ಬರನೊಬ್ಬರು ಬಿಟ್ಟು ಇರಲು ಸಾಧ್ಯವಿರಲಿಲ್ಲ. ಇದರಿಂದಾಗಿ ಮದುವೆ ಆಗುವುದಾದರೇ ಇಬ್ಬರು ಒಂದೇ ವ್ಯಕ್ತಿಯನ್ನು ಮದುವೆಯಾಗಬೇಕು ಎಂದು ನಿರ್ಧರಿಸಿದ್ದರು.

ಹೀಗಾಗಿ ಮಲಶಿರಾಸ್ ತಾಲೂಕಿನ ನಿವಾಸಿ ಅತುಲ್ ಎಂಬಾತ ಇವರಿಬ್ಬರಿಗೂ ಪರಿಚಯವಾಗಿದ್ದ. ಅದೇ ಸಮಯಕ್ಕೆ ಪಿಂಕಿ ಮತ್ತು ರಿಂಕಿಯ ತಂದೆಯು ಮರಣ ಹೊಂದಿದ್ದು, ತಾಯಿಯು ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಳು. ಈ ವೇಳೆ ರಿಂಕಿ ಮತ್ತು ಪಿಂಕಿಯ ಸಹಾಯಕ್ಕೆ ಅತುಲ್ ಧಾವಿಸುತ್ತಿದ್ದ. ಈ ಪರಿಚಯ ಪ್ರೀತಿಗೆ ತಿರುಗಿ ಮೂವರು ಮದುವೆ ಆಗಲು ನಿರ್ಧರಿಸಿದ್ದು, ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅದ್ಧೂರಿಯಾಗಿ ಮದುವೆ ಆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!