ಮದುವೆಗಾಗಿ ವಿಮಾನವನ್ನೇ ಬುಕ್ ಮಾಡಿ ಹೊರಟ್ರು ಈ ಜೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮದುವೆ ಅಂದರೆ ಅಲ್ಲಿ ಸಂಭ್ರಮ ಇದ್ದೆ ಇರುತ್ತೆ. ಅದ್ರಲ್ಲೂ ಎಲ್ಲರು ಜೊತೆಯಾದರೆ ಹೇಳುವುದೇ ಬೇಡ ಆ ಗಮ್ಮತ್ ಗೌಜಿ ಬೇರೇನೇ.. ಅದರಲ್ಲೂ ಮದುವೆ ಸಮಯದಲ್ಲಿ ದಿಬ್ಬಣಕ್ಕೆ ಹೋಗುವ ಸಂಭ್ರಮವೂ ಇನ್ನು ಖುಷಿ ನೀಡುತ್ತೆ.

ಕೆಲವರು ಬಸ್, ಲಾರಿ, ಬೈಕ್ ಹೀಗೆ ವಿವಿಧ ರೀತಿಯಲ್ಲಿ ಹೋಗುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಜೋಡಿ ಮದುವೆಗೆಂದು ಒಂದು ವಿಮಾನವನ್ನೇ ಬುಕ್ ಮಾಡಿದ್ದಾರೆ.

ಹೌದು, ವರ ಮತ್ತು ವಧು ಇಬ್ಬರು ಸೇರಿ ತಮ್ಮ ಮದುವೆಗೆ ಸಂಬಂಧಿಗಳು, ಸ್ನೇಹಿತರು ಹಾಜರಾಗಲು ವಿಮಾನವನ್ನೇ ಬುಕ್ ಮಾಡಿದ್ದಾರೆ. ಇವರು ಮಹಾರಾಷ್ಟ್ರದ ಪುಣೆಯವರಾಗಿದ್ದು, ಮದುವೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಡೆಯುತ್ತಿದೆ.

ಇದರ ವಿಡಿಯೋ ವಧುವಿನ ಸಹೋದರಿಯೊಬ್ಬಳು ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ತಾವೆಲ್ಲರೂ ಸಹೋದರಿಯ ಮದುವೆಗೆ ಹೋಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈ ವೀಡಿಯೋಕ್ಕೆ ಅನೇಕ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಅದರಲ್ಲಿ ಒಬ್ಬಾತ ನನಗೆ ನನ್ನ ಜೀವನದಲ್ಲಿ ಬೇಕಾಗಿರುವುದು ಈ ರೀತಿಯ ಹಣ ಎಂದು ತಿಳಿಸಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!