ದೇಶ ಕಟ್ಟುವ ಯುವ ಜನಾಂಗಕ್ಕೆ ನೈಜ ಇತಿಹಾಸ ತಿಳಿಸುವುದು ಅನಿವಾರ್ಯ: ಮಂಗೇಶ್ ಭೇಂಡೆ

ಹೊಸದಿಗಂತ ವರದಿ ಕಲಬುರಗಿ:

ಭಾರತದ ಭವಿಷ್ಯದ ಆಶಾಕಿರಣ ಆಗಿರುವಂತಹ ಹಾಗೂ ದೇಶ ಕಟ್ಟುವ ಯುವ ಪೀಳಿಗೆಗೆ ನಮ್ಮ ನೈಜ ಇತಿಹಾಸದ ಮೂಲ ಪ್ರಜ್ಞೆ ಮಾಡಿಸುವುದು ಅತ್ಯಂತ ಆನಿವಾಯ೯ವಾಗಿದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖರಾದ ಶ್ರೀಯುತ ಮಂಗೇಶ್ ಭೇಂಡೆ ಅಭಿಮತ ವ್ಯಕ್ತಪಡಿಸಿದ್ದಾರೆ.

ಬುಧವಾರ ಅವರು ಕೇಶವ ಸೇವಾ ಸಮಿತಿ ಕಲಬುರಗಿ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಕಚೇರಿ ಕಲಬುರಗಿ ಸ್ನಾತಕೋತ್ತರ ಸಭಾಂಗಣದಲ್ಲಿ ಹೈದ್ರಾಬಾದ್ ಮುಕ್ತಿ ಸಂಘಷ೯ ಅಮೃತ ಮಹೋತ್ಸವ ಕುರಿತು ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣ ಕಾಯ೯ಕ್ರಮದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವಷ೯ಗಳ ಕಾಲ ಕಳೆದರೂ,ಈ ಭಾಗಕ್ಕೆ ಒಂದ ವಷ೯ ತಡವಾಗಿ ಸ್ವಾತಂತ್ರ್ಯ ಸಿಕ್ಕಿದೆ.ಈ ಸಂಗತಿಯನ್ನು ನಾವ್ಯಾರು ಮರೆಯಬಾರದು. ಇಂದಿನ ಯುವ ಪೀಳಿಗೆಗೆ ಅಖಂಡ ಭಾರತದ ನಕ್ಷೆಯೂ ಪರಿಚಯ ಇರದೇ ಇರುವುದು ತುಂಬಾ ದುಃಖದ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಭಾಗವು ನಿಜಾಮನ ಅಧೀನದಲ್ಲಿ ಇದ್ದಾಗ,ಅದನ್ನು ಸ್ವತಂತ್ರ ಪಡಿಸಲು ಅನೇಕ ಮಹನೀಯರು ತಮ್ಮ ಪ್ರಾಣ ಹಾಗೂ ರಕ್ತವನ್ನು ಹರಿಸಿದ್ದು ನಾವೆಲ್ಲರೂ ಸ್ಮರೀಸಬೇಕಾಗಿದೆ.ಅಂದಿನ ದಿನಗಳಲ್ಲಿ ಸದಾ೯ರ್ ವಲ್ಲಭಭಾಯಿ ಪಟೇಲ್ ಅವರು ಇರದೇ ಹೋಗಿದ್ದರೆ,ನಾವು ಯಾರು ಇಂದು ಈ ವಿಚಾರ ಸಂಕಿರಣ ಕಾಯ೯ಕ್ರಮದಲ್ಲಿ ಭಾಗವಹಿಸುತ್ತಿರಲಿಲ್ಲ.ಹೀಗಾಗಿ ದೇಶ ಕಟ್ಟುವ ಜನಾಂಗಕ್ಕೆ ದೇಶದ ನೈಜ ಇತಿಹಾಸ ತಿಳಿಸುವ ಅನಿವಾಯ೯ತೆ ಇದೆ ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಪ್ರಾಂತ ಪ್ರಚಾರಕರಾದ ಶ್ರೀನಿವಾಸ ನಾಯಕ್,ದೇವಗಿರಿ ಪ್ರಾಂತದ ಸಾಮಾಜಿಕ ಸದ್ಬಾವದ ಸಹ ಪ್ರಾಂತ ಸಂಚಾಲಕ ಆಶೀಷ್ ಜಾಧವ ಸೇರಿದಂತೆ ಅನೇಕ ಸಂಘದ ಪ್ರಚಾರಕರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!