ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗೋವು ಕಡಿಯುವುದರಲ್ಲಿ ಸಾರ್ಥಕತೆ ಇಲ್ಲ. ಬದಲಿಗೆ ಗೋವು ಸಾಕುವುದರಲ್ಲಿ ಸಾರ್ಥಕತೆ ಇದೆ ಎಂದು ಪಶು ಸಂಗೋಪನ ಇಲಾಖೆ ಸಚಿವ ವೆಂಕಟೇಶ್ ಹೇಳಿಕೆಗೆ ಮಾಜಿ ಗೃಹ ಸಚಿವ ಮತ್ತು ತೀರ್ಥಹಳ್ಳಿ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ತಿರುಗೇಟು ನೀಡಿದರು.
ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಪಶುಸಂಗೋಪನಾ ಸಚಿವರು ಕಟುಕರ ರೀತಿ ಮಾತನಾಡುವುದು ಸರಿಯಲ್ಲ, ಮೊದಲು ಅದನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದರು. ಯಾರನ್ನು ತೃಪ್ತಿಪಡಿಸಬೇಕೆಂದು ಈ ರೀತಿ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಇದು ತುಂಬಾ ದಿನ ನಡೆಯುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಎಲ್ಲರೂ ತಾಯಿಯ ಎದೆಹಾಲು ನಿಲ್ಲಿಸಿದ ಬಳಿಕ ಹಸುವಿನ ಹಾಲನ್ನು ಕುಡಿಯುತ್ತಾರೆ. ಹೀಗಾಗಿಯೇ ಗೋ ಅನ್ನು ತಾಯಿ ಎಂದು ಕರೆಯುತ್ತಾರೆ. ಇತ್ತೀಚೆಗೆ ನಾವು ಸಾವಯವ ಕೃಷಿಯತ್ತ ವಾಲುತ್ತಿದ್ದೇವೆ. ಇದಕ್ಕಾಗಿ ಜಾನುವಾರುಗಳು ಬೇಕೇ ಬೇಕು. ಇಂದು ಜಾನುವಾರು ಗೊಬ್ಬರಕ್ಕೆ ಬೆಲೆ ಎಷ್ಟಾಗಿದೆ ಎಂಬುದನ್ನು ಎಲ್ಲರೂ ಯೋಚಿಸಬೇಕಾಗಿದೆ ಎಂದು ಹೇಳಿದರು.