ಪ್ರಾಣಿಪಕ್ಷಿಗಳನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ: ಎಲ್. ಆರ್ ಮಹದೇವಸ್ವಾಮಿ

ದಿಗಂತ ವರದಿ ಮೈಸೂರು:

ಮೈಸೂರಿನಲ್ಲಿ ಬೇಸಿಗೆಯ ತಾಪಮಾನದಿಂದ ಜೀವಸಂಕುಲ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ತಂಡ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರಾಣಿಪಕ್ಷಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮೂಕಸ್ಪಂದನೆ ಎಂಬ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಅಭಿಯಾನವು 2 ತಿಂಗಳ ನಿರಂತರವಾಗಿ ಮೈಸೂರಿನ ವಿವಿಧ ಪ್ರದೇಶಗಳಲ್ಲಿ ಮೂಕ ಸ್ಪಂದನ ಅಭಿಯಾನ ಹಮ್ಮಿಕೊಂಡಿದ್ದು , ನ್ಯಾಯಾಲಯದ ಮುಂಭಾಗ ಮರಗಿಡಗಳಲ್ಲಿ ಆಹಾರ ನೀರಿನ ಬಟ್ಟಲು ಅಳವಡಿಸುವ ಮೂಲಕ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್. ಆರ್ ಮಹದೇವಸ್ವಾಮಿ ಮುಕ ಸ್ಪಂದನ ಅಭಿಯಾನಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು , ಭೂಮಿಯ ಮೇಲೆ ಕಾಲಬದಲಾವಣೆ ಜಗದ ನಿಯಮ ಅದಕ್ಕೆ ಹೊಂದಿಕೊಂಡು‌‌ ಜೀವಿಸುವುದು ಪ್ರತಿಯೊಬ್ಬರ ಕರ್ತವ್ಯ, ಮನುಷ್ಯ ಪ್ರತಿಯೊಂದಕ್ಕೂ ಪರಿಸರದ ಮೇಲೆ ಅವಲಂಬಿತನಾಗುತ್ತಾನೆ ಆದರೆ ಪ್ರಾಣಿಪಕ್ಷಿಗಳ ಪರಿಸರ ಉಳಿಸುವ ಸೇವಾಮನೋಭಾವ ಬೆಳಸಿಕೊಳ್ಳಬೇಕು, ಹೆಚ್ಚು ಸಸಿಗಳನ್ನು ನೆಡಲು ಮುಂದಾದರೆ ಪ್ರಾಣಿಪಕ್ಷಿಗಳ ರಕ್ಷಣೆಯಾಗುತ್ತದೆ, ಭವಿಷ್ಯದ ಪರಿಸರ ಸಂರಕ್ಷಣೆಯ ಪರಿಕಲ್ಪನೆಯ ನಿಟ್ಟಿನಲ್ಲಿ ಮೈಸೂರು ಅರಸರು ಮೃಗಾಲಯ ಕುಕ್ಕರಹಳ್ಳಿ ಕೆರೆ ಕಾರಂಜಿ ಕೆರೆ ಮಾದರಿ ಬಡಾವಣೆಗಳ ಉದ್ಯಾನವನಗಳನ್ನು ನಿರ್ಮಿಸಿದ್ದಾರೆ ಅದನ್ನು ಉಳಿಸಿಕೊಂಡು ಹೋಗುವುದು ಮೈಸೂರಿಗರ ಕರ್ತವ್ಯ ಎಂದರು.

ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ ಮಾತನಾಡಿ, ಹಿಂದಿನ ವರ್ಷಗಳಲ್ಲಿ ಮೈಸೂರಿನ ಪ್ರತಿ ಮನೆಗಳ ಮುಂದೆ ಹಸು ಕರು ಪಕ್ಷಿಗಳು ನೀರು ಕುಡಿಯಲು ಹಿಂದೆ ಕಲ್ಲಿನ ನೀರಿನ ತೊಟ್ಟಿ ಯನ್ನು ಮನೆ ಮುಂದೆ ಸ್ಥಾಪಿಸುತ್ತಿದ್ದರು ಪಶು ಪಕ್ಷಿಗಳು ಆನಂದದಿಂದ ನೀರು ಕುಡಿದು ಕಂಡ ತಾಣಿಸಿಕೊಳ್ಳುತ್ತಿದ್ದವು ,ಆದರೆ ಈ ದಿನಗಳಲ್ಲಿ ಅವೆಲ್ಲ ಕಣ್ಮರೆ ಆಗಿರುವುದು ವಿಷಾದನೀಯ , ನಿಸರ್ಗದಲ್ಲಿ ಪಶು ಪಕ್ಷಿ ಜಲಚರಗಳೆ ಹಿರಿತನದಲ್ಲಿ ಇರುವುದು ಮಾನವ ಇತ್ತೀಚಿನ ಸಂಕುಲ ತನ್ನ ಕ್ಷೇಮಕ್ಕಾಗಿ ಬಡಾವಣೆಗಳನ್ನು ನಿರ್ಮಿಸಿ ಕೊಂಡು ಕೆರೆ ಕಟ್ಟೆ ಗಳನ್ನು ಮುಚ್ಚಿ ವೃಕ್ಷಗಳನ್ನು ಕಡೆದು ಆ ಅಮಾಯಕ ಮೂಕ ಜೀವಿಗಳಿಗೆ ನೀರು ನೆರಳು ಇಲ್ಲದಂತೆ ಮಾಡಿರುವುದು ದುರಂತ ಈ ನಿಟ್ಟಿನಲ್ಲಿ ಮಾನವೀಯತೆ ಹೊಂದಿರುವವರಿಗೆ ಮನುಷ್ಯ ಸಂಕುಲ ಸಂಕುಲ ಈ ಬೇಸಿಗೆಯ ಧಗೆಯನ್ನು ನೀಗಿಸಲು ಅವುಗಳಿಗೆ ನೀರು ಆಹಾರ ವನ್ನು ನೀಡಿ ಸಕಲ ಜೀವರಾಶಿಗಳನ್ನು ಕಾಪಾಡಲು ಮುಂದಾಗಬೇಕೆಂದು ಕರೆ ನೀಡಿದರು.

ನಂತರ ಮಾತನಾಡಿದ ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ. ಮಹದೇವಸ್ವಾಮಿ, ನ್ಯಾಯಾಲಯದ ಆವರಣದಲ್ಲೂ ಸಣ್ಣಪುಟ್ಟ ಪ್ರಾಣಿ ಪಕ್ಷಿಗಳ ಸಂಖ್ಯೆ ಹೆಚ್ಚಿದೆ ಸಂತತಿಗಾಗಿ ವಲಸೆ ಬರುವ ಹಕ್ಕಿಗಳನ್ನು ಸಹ ನಾವು ಕಾಣಬಹುದು, ಮನುಷ್ಯರಂತೆ ಪಕ್ಷಿಗಳಿಗೂ ಬದುಕುವ ಸಮಾನ ಹಕ್ಕಿದೆ ಆದರೆ ಮೂಕಪ್ರಾಣಿಗಳು ತಮ್ಮ ಅಳಲನ್ನು ಹೇಳಿಕೊಳ್ಳಲು ಆಗುವದಿಲ್ಲ ಹಾಗಾಗಿ ಪರಿಸರ ರಕ್ಷತಿ ರಕ್ಷಿತಃ ಅಭಿಯಾನ ಶ್ಲಾಘನೀಯ, ನಮ್ಮ ವಕೀಲರ ಸಂಘದ ವತಿಯಿಂದಲೂ ಸಹ ನ್ಯಾಯಾಲಯದ ಆವರಣದಲ್ಲಿರುವ ಮರಗಳಲ್ಲಿ ಪ್ರಾಣಿಪಕ್ಷಿಗಳಿಗೆ ಆಹಾರ ನೀರು ಇಡುವ ಇಡಿಕೆ ಅಭಿಯಾನ ಪ್ರಾರಂಭಿಸಲಾಗುವುದು ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!