CINE | ಈ ವಿಷಯದ ಮೇಲೆ ಸಿನಿಮಾ ಮಾಡೋದು ರಾಜಮೌಳಿ ಕನಸಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆರ್‌ಆರ್‌ಆರ್ ಮೂಲಕ ಮನೆಮಾತಾಗಿರುವ ನಿರ್ದೇಶಕ ರಾಜಮೌಳಿ ಪೌರಾಣಿಕ ಸಿನಿಮಾಗಳನ್ನು ಮಾಡುವುದರಲ್ಲಿ ಎತ್ತಿದ ಕೈ ಎನಿಸಿಕೊಂಡಿದ್ದಾರೆ.

ಪೌರಾಣಿಕ ಸಿನಿಮಾಗಳ ಮೇಲೆ ಹೆಚ್ಚು ಒಲವಿರುವ ರಾಜಮೌಳಿ ಅವರಿಗೆ ಮಹಾಭಾರತ ಸಿನಿಮಾ ಮಾಡುವ ಆಸೆಯಿದೆಯಂತೆ.

ವರ್ಷಗಟ್ಟಲೆ ಸಿನಿಮಾ ತಯಾರಿಸಿ, ಯಶಸ್ಸು ಬಾಚಿಕೊಳ್ಳುವ ರಾಜಮೌಳಿ ಈ ಹಿಂದೆಯೂ ಮಗಧೀರ, ಬಾಹುಬಲಿಯಂಥ ಸಿನಿಮಾಗಳನ್ನು ನೀಡಿದ್ದಾರೆ. ಆರ್‌ಆರ್‌ಆರ್‌ನಿಂದ ರಾಜಮೌಳಿ ಎಲ್ಲೆಡೆ ಫೇಮಸ್ ಆಗಿದ್ದು, ರಾಜಮೌಳಿ ಸಿನಿಮಾದಲ್ಲಿ ನಟಿಸೋದಕ್ಕೆ ಎಲ್ಲ ನಟ ನಟಿಯರು ಕಾದು ಕುಳಿತಿದ್ದಾರೆ.

ಮಹಾಭಾರತವನ್ನು ಸಿನಿಮಾ ಮಾಡೋದು ಸುಲಭದ ಮಾತಲ್ಲ, ಎಲ್ಲ ಆವೃತ್ತಿಗಳ ಓದಿ ಅರ್ಥೈಸಿಕೊಳ್ಳಬೇಕು, ಹತ್ತು ಪಾರ್ಟ್‌ಗಳಲ್ಲಿ ಸಿನಿಮಾ ಮಾಡಬಹುದು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!