ಡ್ರೋನ್ ಕಣ್ಗಾವಲು ಹೊಂದಿರುವ ದೇಶದ ಮೊದಲ ರಾಜ್ಯ ಕೇರಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದ ಎಲ್ಲಾ ಪೊಲೀಸ್ ಜಿಲ್ಲೆಗಳಲ್ಲಿ ಡ್ರೋನ್ ಕಣ್ಗಾವಲು ವ್ಯವಸ್ಥೆಯನ್ನು ಹೊಂದಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ.

ಗುರುವಾರದಂದು ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಎಲ್ಲಾ ಪೊಲೀಸ್ ಜಿಲ್ಲೆಗಳಿಗೆ ಡ್ರೋನ್‌ಗಳನ್ನು ಮತ್ತು ವಿಶೇಷ ತರಬೇತಿ ಪಡೆದ ಡ್ರೋನ್ ಪೈಲಟ್‌ಗಳಿಗೆ ಡ್ರೋನ್ ಪೈಲಟ್ ಪರವಾನಗಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಅವರು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಆಂಟಿ-ಡ್ರೋನ್ ಸಾಫ್ಟ್‌ವೇರ್ ಅನ್ನು ಸಹ ಬಿಡುಗಡೆ ಮಾಡಿದರು.

ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಪೊಲೀಸ್ ಪಡೆಯನ್ನು ಆಧುನೀಕರಣಗೊಳಿಸುವಲ್ಲಿ ಕೇರಳವು ಮುಂಚೂಣಿಯಲ್ಲಿದೆ. ಸಮಾಜದಲ್ಲಿ ಡ್ರೋನ್‌ಗಳ ಬಳಕೆ ಹೆಚ್ಚಿರುವುದರಿಂದ ಡ್ರೋನ್ ವಿರೋಧಿ ವ್ಯವಸ್ಥೆಯ ಅಭಿವೃದ್ಧಿಯೂ ಮುಖ್ಯವಾಗಿದೆ. ತರಬೇತಿ ಪಡೆದ ಡ್ರೋನ್ ಪೈಲಟ್‌ಗಳು ತಾವು ಕಲಿತದ್ದನ್ನು ತಮ್ಮ ಸಹೋದ್ಯೋಗಿಗಳಿಗೆ ಕಲಿಸಬೇಕು ಎಂದು ವಿನಂತಿಸಿಕೊಂಡರು.

ಕೇರಳ ಪೊಲೀಸರು 25 ಪೊಲೀಸ್ ಸಿಬ್ಬಂದಿಯನ್ನು ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ವಿಶೇಷ ತರಬೇತಿಗಾಗಿ ಕಳುಹಿಸಿದ್ದರು ಮತ್ತು ಇನ್ನೂ 20 ಜನರಿಗೆ ಕೇರಳದ ಡ್ರೋನ್ ಲ್ಯಾಬ್‌ನಿಂದ ಮೂಲಭೂತ ಡ್ರೋನ್ ಕಾರ್ಯಾಚರಣೆ ತರಬೇತಿಯನ್ನು ಕೊಡಲಾಗಿದೆ.

ರಾಜ್ಯ ಮಟ್ಟದಲ್ಲಿ ಡ್ರೋನ್ ಫೊರೆನ್ಸಿಕ್ ಲ್ಯಾಬ್ ಮತ್ತು ಆ್ಯಂಟಿ ಡ್ರೋನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಮೊದಲ ರಾಜ್ಯ ಕೇರಳ. ಡ್ರೋನ್ ಫೊರೆನ್ಸಿಕ್ ಲ್ಯಾಬ್ ದುರುದ್ದೇಶಪೂರಿತ ಡ್ರೋನ್‌ಗಳನ್ನು ಗುರುತಿಸಬಹುದು ಮತ್ತು ವಿವರವಾದ ವಿಶ್ಲೇಷಣೆಗಾಗಿ ಅವುಗಳಿಂದ ಸಂಪೂರ್ಣ ಡೇಟಾವನ್ನು ಮರುಪಡೆಯಬಹುದು ಎಂದು ಐಪಿಎಸ್ ಅಧಿಕಾರಿ ತಿಳಿಸಿದ್ದಾರೆ.

ಅಂತೆಯೇ ಡ್ರೋನ್ ವಿರೋಧಿ ವ್ಯವಸ್ಥೆಯು 5 ಕಿಲೋಮೀಟರ್ ತ್ರಿಜ್ಯದಲ್ಲಿ ಯಾವುದೇ ಡ್ರೋನ್ ಅನ್ನು ಗುರುತಿಸಬಹುದು ಮತ್ತು ಅದನ್ನು ನಿಶ್ಚಲಗೊಳಿಸಬಹುದು ಮತ್ತು ಅದನ್ನು ವಶಪಡಿಸಿಕೊಳ್ಳಲೂಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!