ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್‌ನವರೇ ದ್ವೇಷ ಸಾಧಿಸಿ ಶತ್ರುವನ್ನ ಬಲಿಷ್ಠ ಮಾಡಿದ್ದಾರೆ ಎಂದು ಸಚಿವ ಕೆ.ಎನ್ ರಾಜಣ್ಣ ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದಿಸಿದ ಕುರಿತು ವಿಚಾರವಾಗಿ, ಏನೇ ಇದ್ದರೂ ತಪ್ಪನ್ನೇ ಮುಂದಿಟ್ಟುಕೊಂಡು ಶತ್ರುವನ್ನು ಬಲಿಷ್ಠ ಮಾಡಬಾರದು. ಈಗ ದೆಹಲಿಯಲ್ಲಿ ಆಗಿದೆ, ಹಿಂದೆ ಹರಿಯಾಣದಲ್ಲಿ ಆಗಿತ್ತು. ಇಬ್ಬರಿಗೂ ಜಂಭ ಇದೆ. ಹೀಗಾಗಿ ಸೋಲಾಗಿದೆ ಎಂದು ಕಿಡಿಕಾರಿದರು.