ಇಸ್ರೇಲ್ ಸರ್ಕಾರದ ಕೃತ್ಯ ಖಂಡಿಸುವುದು ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ: ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಹರಿಹಾಯ್ದಿದ್ದಾರೆ.

ಕಳೆದ ಹತ್ತು ತಿಂಗಳಿನಿಂದ ನಡೆಯುತ್ತಿರುವ ಗಾಜಾದಲ್ಲಿ ಮೇಲಿನ ದಾಳಿಯಲ್ಲಿ ಸುಮಾರು 40,000 ಜನರು ಸಾವಿಗೆ ಕಾರಣವಾಗಿದೆ. ಇಸ್ರೇಲ್ ನಡೆಯುತ್ತಿರುವ ಜನಾಂಗೀಯ ಹತ್ಯೆಯ ಕ್ರಮಗಳನ್ನು ಖಂಡಿಸಬೇಕು ಮತ್ತು ಅವುಗಳನ್ನು ನಿಲ್ಲಿಸುವಂತೆ ಒತ್ತಡ ಹೇರಲು ಜಾಗತಿಕ ಸಮುದಾಯ ಮುಂದಾಗಬೇಕು ಎಂದು ಪ್ರಿಯಾಂಕ ಒತ್ತಾಯಿಸಿದರು.

ದ್ವೇಷ ಮತ್ತು ಹಿಂಸಾಚಾರದಲ್ಲಿ ನಂಬಿಕೆಯಿಲ್ಲದ ಇಸ್ರೇಲಿ ನಾಗರಿಕರು ಹಾಗೂ ಜಗತ್ತಿನ ಪ್ರತಿ ಸರ್ಕಾರ ಸೇರಿದಂತೆ ಇಸ್ರೇಲಿ ಸರ್ಕಾರ ಕೃತ್ಯವನ್ನು ಖಂಡಿಸುವುದು ಪ್ರತಿಯೊಬ್ಬ ಬಲ- ಚಿಂತನೆಯ ವ್ಯಕ್ತಿಯ ನೈತಿಕ ಜವಾಬ್ದಾರಿಯಾಗಿದೆ. ನಾಗರಿಕತೆ ಮತ್ತು ನೈತಿಕತೆಯನ್ನು ಪ್ರತಿಪಾದಿಸುವ ಜಗತ್ತಿನಲ್ಲಿ ಅವರ ಕ್ರಮಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.

ಗಾಜಾದಲ್ಲಿ ಇಸ್ರೇಲ್​ ನಡೆಯುತ್ತಿರುವ ಭೀಕರ ನರಮೇಧದಿಂದ ನಾಗರಿಕರು, ತಾಯಂದಿರು, ತಂದೆ, ವೈದ್ಯರು, ದಾದಿಯರು, ಸಹಾಯ ಕಾರ್ಯಕರ್ತರು, ಪತ್ರಕರ್ತರು, ಶಿಕ್ಷಕರು, ಬರಹಗಾರರು, ಕವಿಗಳು, ಹಿರಿಯ ನಾಗರಿಕರು ಮತ್ತು ದಿನದಿಂದ ದಿನಕ್ಕೆ ನಾಶವಾಗುತ್ತಿರುವ ಸಾವಿರಾರು ಮುಗ್ಧ ಮಕ್ಕಳ ಪರವಾಗಿ ಮಾತನಾಡಲು ಇದು ಸಾಕಾಗುವುದಿಲ್ಲ ಎಂದು ಹೇಳಿದರು.

ಅಮೆರಿಕ ಸಂಸತ್‌ನಲ್ಲಿ ಮಾಡಿದ ಭಾಷಣದಲ್ಲಿ ಗಾಜಾ ಮೇವಿನ ದಾಳಿಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಮರ್ಥಿಸಿಕೊಂಡಿದ್ದರು. ಅವರ ಭಾಷಣ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಗಾಜಾದಲ್ಲಿ ದಾಳಿಯನ್ನು ಪ್ರಿಯಾಂಕ ಟೀಕಿಸಿದ್ದಾರೆ.

ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಅಮೆರಿಕ ಸಂಸತ್​ನಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿದ್ದಾರೆ. ನಾಗರಿಕತೆ ಮತ್ತು ಅನಾಗರಿಕತೆ ನಡುವಿನ ಘರ್ಷಣೆ ಎಂದು ನೆತನ್ಯಾಹು ಹೇಳಿದ್ದಾರೆ. ಅವರು ಹೇಳುತ್ತಿರುವುದು ನಿಜ. ನೆತಹ್ಯಾವು ಮತ್ತು ಅವರ ಸರ್ಕಾರದ ಬರ್ಬರತೆಗೆ ಹೆಚ್ಚಿನ ಪಾಶ್ಚಿಮಾತ್ಯ ರಾಷ್ಟ್ರಗಳು ಬೆಂಬಲ ನೀಡುತ್ತಿವೆ. ಇದು ನಿಜಕ್ಕೂ ನಾಚಿಗೇಡಿನ ಸಂಗತಿ ಎಂದು ಪ್ರಿಯಾಂಕಾ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!