ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ರಾಜ್ಯ ಸರ್ಕಾರ ಸಿದ್ದಗಂಗಾ ಮಠಕ್ಕೆ ವಿದುತ್ಯ್ ಶಾಕ್ ಕೊಟ್ಟಿದೆ.
ಸರ್ಕಾರಿ ನೀರಾವರಿ ಯೋಜನೆಗೆ ಕೆಐಎಡಿಬಿ ಬಳಸಿದ ಬರೊಬ್ಬರಿ 70,31,438 ರೂ ವಿದ್ಯುತ್ ಬಿಲ್ ಅನ್ನು ಸಿದ್ದಗಂಗಾ ಮಠ ಭರಿಸುವಂತೆ ಕೆಐಡಿಬಿ ಅಭಿಯಂತರರು ಪತ್ರ ಬರೆದಿದ್ದಾರೆ. ಇದು ಸದ್ಯ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಬಗ್ಗೆ ಸಿದ್ದಲಿಂಗ ಸ್ವಾಮೀಜಿ ಹೇಳಿಕೆ ನೀಡಿದ್ದು, ನೋಟಿಸ್ ನೀಡಿದ್ದು ದೊಡ್ಡ ವಿಚಾರವಲ್ಲ, ದೊಡ್ಡದು ಮಾಡಬೇಡಿ ಎಂದು ಹೇಳಿದ್ದಾರೆ.
ಕೆಐಎಡಿಬಿಯಿಂದ ನಮ್ಮ ಮಠಕ್ಕೆ ನೋಟಿಸ್ ಬಂದಿರುವುದು ನಿಜ. ಇದನ್ನು ಬಗೆಹರಿಸುವಂತೆ ಸರ್ಕಾರಕ್ಕೆ ಮಠದಿಂದ ಪತ್ರ ಬರೆದಿದ್ದೇವೆ. ಕೆಐಡಿಬಿಯವರು 70 ಲಕ್ಷ ರೂ. ಬಿಲ್ ಕಟ್ಟಲಾಗಲ್ಲ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಪರಿಹಾರ ಮಾಡಿಕೊಡಿ ಎಂದಿದ್ದೆವು.
ಇನ್ನು ಸಚಿವ ಎಂ.ಬಿ.ಪಾಟೀಲ್ ನೋಟಿಸ್ ಹಿಂಪಡೆಯುತ್ತೇವೆ ಅಂದರೆ ಸಂತಸ. ನೋಟಿಸ್ ಸಂಬಂಧ ಕ್ರಮಕೈಗೊಳ್ಳಿ ಎಂದು ನಾವು ಯಾರಿಗೂ ಹೇಳಿಲ್ಲ. ಸಿದ್ಧಗಂಗಾ ಮಠಕ್ಕೆ ನೋಟಿಸ್ ವಿಚಾರದಲ್ಲಿ ಸರ್ಕಾರ ಇತ್ಯರ್ಥ ಮಾಡುತ್ತೆ ಎಂದಿದ್ದಾರೆ.