Wednesday, July 6, 2022

Latest Posts

ಸಪ್ತಪದಿ ತುಳಿದ ನಯನತಾರಾ, ವಿಘ್ನೇಶ್:‌ ಸಿನಿ ತಾರೆಯರು, ಅಭಿಮಾನಿಗಳಿಂದ ಶುಭಾಶಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಹಾಗೂ  ನಿರ್ದೇಶಕ ವಿಘ್ನೇಶ್ ಶಿವನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಏಳು ವರ್ಷದ ಪ್ರೀತಿಗೆ ಇಂದು ಮದುವೆಯೆಂಬ ಅಧಿಕೃತ ಮುದ್ರೆ ಬಿದ್ದಿದೆ. ಇಂದು ಬೆಳಗ್ಗೆ 8.30ಕ್ಕೆ ಮಹಾಬಲಿಪುರಂನಲ್ಲಿರುವ ಐಷಾರಾಮಿ ರೆಸಾರ್ಟ್‌ವೊಂದರಲ್ಲಿ ಈ ಜೋಡಿ ಸಪ್ತಪದಿ ತುಳಿದರು.

ಈ ತಾರಾ ಜೋಡಿಯ ಮದುವೆಯಲ್ಲಿ ಟಾಲಿವುಡ್‌, ಕಾಲಿವುಡ್‌, ಬಾಲಿವುಡ್‌ ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು ಹಾಜರಿದ್ದರು. ಸೂಪರ್ ಸ್ಟಾರ್ ರಜನಿಕಾಂತ್, ನಟ ಶಾರುಖ್ ಖಾನ್, ನಟ ಶರತ್ ಕುಮಾರ್, ರಾಧಿಕಾ ಶರತ್ ಕುಮಾರ್, ನಟ ಕಾರ್ತಿ ಮುಂತಾದ ಸಿನಿ ರಂಗದ ಸೆಲೆಬ್ರೆಟಿಗಳು ಹಾಜರಾಗಿದ್ರು. ಇನ್ನೂ ಮುದ್ದಾದ ಜೋಡಿಗೆ ದಕ್ಷಿಣ ಭಾರತದ ಚಿತ್ರರಂಗ ಹಾಗೂ ಅಭಿಮಾನಿಗಳು ಮನದುಂಬಿ ಹರಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss