ಇದು ಐತಿಹಾಸಿಕ ಕ್ಷಣ: 2 ತಿಂಗಳ ಪುಟ್ಟ ಮಗುವಿಗೆ ಸಂಸತ್ತಲ್ಲಿ ಹಾಲುಣಿಸಿ ಇತಿಹಾಸ ಬರೆದ ಇಟಲಿ ಸಂಸದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಟಲಿ ಸಂಸದೆ ಸಂಸತ್‌ನಲ್ಲಿ ಸಾರ್ವಜನಿಕವಾಗೇ ತಮ್ಮ ಮಗುವಿಗೆ ಸ್ತನ್ಯಪಾನ ಮಾಡಿದ್ದು, ಈ ಮೂಲಕ ಇತಿಹಾಸ ಬರೆದಿದ್ದಾರೆ.
ಇಟಲಿಯ ಸಂಸದೆ ಗಿಲ್ಡಾ ಸ್ಪೋರ್ಟಿಯೆಲ್ಲೋ ಅವರು ಜೂನ್ 7 ರಂದು ರೋಮ್‌ನಲ್ಲಿರೋ ದೇಶದ ಸಂಸತ್ತಿನಲ್ಲಿ ತಮ್ಮ 2 ತಿಂಗಳ ಮಗನಾದ ಫ್ರೆಡೆರಿಕೋಗೆ ಹಾಲುಣಿಸುವ ಮೂಲಕ ಈ ಕಾರ್ಯ ಮಾಡಿದ ಇಟಲಿಯ ಮೊದಲ ಮಹಿಳಾ ಸಂಸದೆ ಎನಿಸಿಕೊಂಡಿದ್ದಾರೆ. ಈ ಐತಿಹಾಸಿಕ ಘಟನೆಗೆ ಆಕೆಯ ಸಹ ಸಂಸದರಿಂದ ಸರ್ವಾನುಮತದ ಚಪ್ಪಾಳೆಯೂ ದೊರಕಿತು.

ನವೆಂಬರ್ 2022 ರಲ್ಲಿ, ಸಂಸದೀಯ ನಿಯಮಗಳ ಸಮಿತಿಯು ದೇಶದ ಮಹಿಳಾ ಸಂಸದರಿಗೆ ತಮ್ಮ ಮಕ್ಕಳನ್ನು ಚೇಂಬರ್‌ಗೆ ಕರೆತರಲು ಮತ್ತು ಒಂದು ವರ್ಷದವರೆಗೆ ಅವರಿಗೆ ಹಾಲುಣಿಸಲು ಅನುಮತಿ ನೀಡಿತ್ತು. ಆದರೆ, ಅಂದಿನಿಂದ ಈ ಐತಿಹಾಸಿಕ ಕ್ರಮವನ್ನು ಯಾವ ಮಾಡಿರಲಿಲ್ಲ ಎಂದು ತಿಳಿದುಬಂದಿದೆ. ಜೂನ್ 7 ರಂದು ಗಿಲ್ಡಾ ಸ್ಪೋರ್ಟಿಯೆಲ್ಲೋ ಈ ಮೂಲಕ ಇತಿಹಾಸ ಬರೆದಿದ್ದಾರೆ.

ಇನ್ನು, TheMissRossi ಎಂಬ ಟ್ವಿಟ್ಟರ್ ಬಳಕೆದಾರರು ಸಂಸದೆ ಮಗುವನ್ನು ಎತ್ತಿಕೊಂಡು ಸ್ತನ್ಯಪಾನ ಮಾಡಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಐತಿಹಾಸಿಕ ಘಟನೆಗೆ ಇಡೀ ಸಭೆಯೇ ಚಪ್ಪಾಳೆ ತಟ್ಟುತ್ತಿರುವುದನ್ನು ಸಹ ವಿಡಿಯೋದಲ್ಲಿ ನೋಡಬಹುದು. ಅಲ್ಲದೆ, ಈ ವಿಡಿಯೋಗೆ “ಇಂದು ಇಟಲಿಯ ಗಿಲ್ಡಾ ಸ್ಪೋರ್ಟಿಯೆಲ್ಲೊ ಅವರು ಚೇಂಬರ್ ಆಫ್ ಡೆಪ್ಯೂಟೀಸ್‌ನಲ್ಲಿ ನವಜಾತ ಶಿಶುವಿನೊಂದಿಗೆ ಕಾಣಿಸಿಕೊಂಡ ಮತ್ತು ತನ್ನ ಮಗುವಿಗೆ ಹಾಲುಣಿಸುವ ಫೆಡೆರಿಕೊದ ಮೊದಲ ಸಂಸದರಾಗಿದ್ದಾರೆ. ಇಡೀ ಅಸೆಂಬ್ಲಿಯಿಂದ ಚಪ್ಪಾಳೆಗಳು ದೀರ್ಘ ಮತ್ತು ತೀವ್ರವಾಗಿತ್ತು’’ ಎಂದು ಜರ್ಮನ್ ಭಾಷೆಯಲ್ಲಿ ಶೀರ್ಷಿಕೆಯನ್ನು ಬರೆದಿದ್ದಾರೆ.

https://twitter.com/TheMissRossi/status/1666496212432740354?ref_src=twsrc%5Etfw%7Ctwcamp%5Etweetembed%7Ctwterm%5E1666496212432740354%7Ctwgr%5E2ba363ef64e85feb976c04bd4b38d1155ae1bff8%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2FTheMissRossi%2Fstatus%2F1666496212432740354%3Fref_src%3Dtwsrc5Etfw

ಇಟಲಿಯ ಸಂಸದೆ ಗಿಲ್ಡಾ ಸ್ಪೋರ್ಟಿಯೆಲ್ಲೊ ಮಾತನಾಡಿ “ಹಲವು ಮಹಿಳೆಯರು ಸ್ತನ್ಯಪಾನವನ್ನು ಸಮಯಕ್ಕಿಂತ ಮುಂಚಿತವಾಗಿ ನಿಲ್ಲಿಸುತ್ತಾರೆ. ಇದು, ಆಯ್ಕೆಯಿಂದ ಅಲ್ಲದಿದ್ದರೂ, ಅವರು ಕೆಲಸದ ಸ್ಥಳಕ್ಕೆ ಮರಳಲು ಬಲವಂತವಾಗಿ ನಿಲ್ಲಿಸುತ್ತಾರೆ” ಎಂದು ಎಡ-ಸಿದ್ಧಾಂತ ಪಕ್ಷದ ಸಂಸದೆ ಹೇಳಿಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!