ಶ್ರೀ ಮಧುಕೇಶ್ವರ ದೇವಸ್ಥಾನಕ್ಕೆ ರಂಭಾಪೂರಿ ಶ್ರೀ ಡಾ.ವೀರಸೋಮೆಶ್ವರ ಜಗದ್ಗುರು ಭೇಟಿ

ಹೊಸದಿಗಂತ ವರದಿ, ಬನವಾಸಿ:

ಇಲ್ಲಿಯ ಐತಿಹಾಸಿಕ ಶ್ರೀ ಮಧುಕೇಶ್ವರ ದೇವಸ್ಥಾನಕ್ಕೆ ಗುರುವಾರ ಬಾಳೆಹೊನ್ನೂರು ರಂಭಾಪೂರಿ ಪೀಠದ ಶ್ರೀ ಡಾ.ವೀರಸೋಮೆಶ್ವರ ಜಗದ್ಗುರುಗಳು ಭೇಟಿ ನೀಡಿ, ಪೂಜೆ ನೆರವೇರಿಸಿ ಶ್ರೀ ಮಧುಕೇಶ್ವರ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಹೊಸದಿಗಂತದೊಂದಿಗೆ ಮಾತನಾಡಿದ ಜಗದ್ಗುರುಗಳು, ಬನವಾಸಿಯ ಮಧುಕೇಶ್ವರ ದೇವಸ್ಥಾನದ ಶಿಲ್ಪಕಲೆ, ಶಿವಲಿಂಗ ಐತಿಹಾಸಿಕ ಪ್ರಸಿದ್ಧಿ ಹೊಂದಿರುವ ಜೊತೆಯಲ್ಲಿ ಅದ್ಭುತವಾಗಿದೆ. ಕನ್ನಡದ ಪ್ರಥಮ ರಾಜಧಾನಿಯಾಗಿದ್ದ ಬನವಾಸಿ ಅಭಿವೃದ್ಧಿಯಲ್ಲಿ ಬಹಳ ಹಿಂದುಳಿದಿರುವುದು ಬೇಸರದ ಸಂಗತಿ. ಪುರಾತತ್ವ ಇಲಾಖೆಯ ಅಡಿಯಲ್ಲಿ ಬರುವ ಮಧುಕೇಶ್ವರ ದೇವಸ್ಥಾನಕ್ಕೆ ಬರುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳ ಕೊರತೆ ಬಹಳಷ್ಟಿದೆ. ಬನವಾಸಿಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಜೊತೆಗೆ ಮಾತುಕತೆ ನಡೆಸಲು ರಂಭಾಪೂರಿ ಪೀಠವೂ ಸದಾ ಸಿದ್ದವಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!