ಒಬ್ಬನೇ ವ್ಯಕ್ತಿಗೆ ಒಟ್ಟೊಟ್ಟಿಗೆ‌ ಕೊರೋನಾ, ಮಂಕಿಫಾಕ್ಸ್‌ ಜೊತೆಗೆ ಎಚ್‌ಐವಿ ಪಾಸಿಟಿವ್..!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಸಾಮಾನ್ಯವಾಗಿ ಯಾವುದೇ ಕಾಯಿಲೆ ಬಂದರೆ ತಡೆದುಕೊಳ್ಳುವುದು ಕಷ್ಟ. ಕೆಲ ಕಾಯಿಲೆಗಳು ಮನುಷ್ಯನ ಅಂತಸತ್ವವನ್ನೇ ಬಸಿದುಹಾಕುತ್ತವೆ. ಅಂತಹದ್ದರಲ್ಲಿ ಕೊರೋನಾ, ಮಂಕಿಫಾಕ್ಸ್‌, ಎಚ್‌ಐವಿ ಅಂತಹ ಮಾರಕ ಕಾಯಿಲೆಗಳು ಒಬ್ಬನೇ ವ್ಯಕ್ತಿಗೆ ಒಟ್ಟೊಟ್ಟಿಗೆ ಬಂದರೆ ಹೇಗಿರಬೇಡ!. ಇಟಲಿಯ 35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನಿಗೆ ಇದು ಸಂಭವಿಸಿದೆ.
ಜ್ವರ, ಆಯಾಸ ಮತ್ತು ಗಂಟಲು ನೋವು ಸೇರಿದಂತೆ ಹಲವಾರು ರೋಗಲಕ್ಷಣಗಳಿಂದ ಬಳಲುತ್ತಿದ್ದ ಇಟಾಲಿಯನ್ ವ್ಯಕ್ತಿಯೊಬ್ಬ ತಾನು ಸ್ಪೇನ್ ಪ್ರವಾಸದಿಂದ ಹಿಂದಿರುಗಿದ ಕೆಲವು ದಿನಗಳ ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾನೆ, ಆ ವೇಲೆ ಆತನಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಆತ ಈ ಶಾಕ್‌ ನಲ್ಲಿ ಇರುವಾಗಲೇ ಆತನಿಗೆ ಮಂಕಿಪಾಕ್ಸ್ ಜೊತೆಗೆ HIV ಏಡ್ಸ್‌ ಸಹ ಇರುವುದು ಒಂದಾದ ಮೇಲೊಂದರಂತೆ ತಿಳಿದುಬಂದಿದೆ. ಈ ರೀತಿಯ ಪ್ರಕರಣ ಪತ್ತೆಯಾದ ವಿಶ್ವದ ಮೊದಲ ದುರಾದೃಷ್ಟವಂತ ವ್ಯಕ್ತಿ ಆತನೇ ಆಗಿದ್ದಾನೆ.
ಆತ ಜೂನ್ 16 ರಿಂದ ಜೂನ್ 20 ರವರೆಗೆ ಐದು ದಿನಗಳನ್ನು ಸ್ಪೇನ್‌ನಲ್ಲಿ ಕಳೆದಿದ್ದ. ಈ ವೇಳೆ ಆತ ಹಲವಾರು ಪುರುಷರೊಂದಿಗೆ ಅಸುರಕ್ಷಿತ ಸೆಕ್ಸ್‌ ಮಾಡಿದ್ದ.
ಜುಲೈ 2 ರಂದು ಆತ ಮನೆಗೆ ಮರಳಿದಾಗ ಕೊರೋನಾ ಪತ್ತೆಯಾಗಿತ್ತು. ಅದೇ ಮಧ್ಯಾಹ್ನ, ಆತನ ಎಡಗೈಯಲ್ಲಿ ರಾಶಸ್ ಕಾಣಿಸಿಕೊಂಡಿತ್ತು. ಮರುದಿನ, ಅವನ ತಲೆ, ಕೈಕಾಲುಗಳು, ಮುಖ ಮತ್ತು ಬೆನ್ನಿನಲ್ಲಿ ಸಣ್ಣ ಗುಳ್ಳೆಗಳು ಕಾಣಿಸಿಕೊಂಡವು.ಜುಲೈ 5 ರ ಹೊತ್ತಿಗೆ, ಇವುಗಳು ಮತ್ತಷ್ಟು ಹರಡಿದವು. ಚರ್ಮದ ಮೇಲೆ ಸಣ್ಣ ಉಬ್ಬುಗಳಾಗಿ ವಿಕಸನಗೊಂಡವು. ಇದರಿಂದ ಗಾಬರಿಯಾದ ಆತ ಇಟಲಿಯ ಕ್ಯಾಟಾನಿಯಾದ ಸ್ಯಾನ್ ಮಾರ್ಕೊ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಹೋದ.
ವೈದ್ಯರು ಅನೇಕ ಪರೀಕ್ಷೆಗಳನ್ನು ನಡೆಸಿದರು ಮತ್ತು ಫಲಿತಾಂಶಗಳು ಮಂಕಿಪಾಕ್ಸ್‌ಗೆ ಧನಾತ್ಮಕವಾಗಿ ಮರಳಿದವು. ಮತ್ತಷ್ಟಡು ಹೆಚ್ಚಿನ ಪರೀಕ್ಷೆಗಳಲ್ಲಿ ಆತನಿಗೆ ಲೈಂಗಿಕವಾಗಿ ಹರಡುವ ಸೋಂಕುಗಳು ಕಾಣಿಸಿಕೊಂಡಿದ್ದನ್ನು ದೃಢಪಡಿಸಿತ್ತು. ಆ ಬಳಿಕ ಅವರು HIV ಪರೀಕ್ಷೆ ಪರೀಕ್ಷೆ ನಡೆಸಿದರು. ಆತನ ದುರಾದೃಷ್ಟಕ್ಕೆ ಅದೂ ಸಹ ಪಾಸಿಟಿವ್‌ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!