Monday, October 2, 2023

Latest Posts

ಗಡುವು ಮುಗಿದ ಬಳಿಕವೂ ಐಟಿಆರ್ ಸಲ್ಲಿಕೆಗೆ ಇನ್ನೂ ಇದೆಯೇ ಅವಕಾಶ?

ಹೊಸದಿಗಂತ ಡಿಜಿಟಲ್ ಡೆಸ್ಕ್:

2022-23 ನೇ ಹಣಕಾಸು ವರ್ಷಕ್ಕೆ ವೇತನದಾರರಿಗೆ ಆದಾಯ ತೆರಿಗೆ ರಿಟನ್ಸ್ (ಐಟಿಆರ್) ಸಲ್ಲಿಸಲು ಭಾನುವಾರ (ಜು. 31) ಕೊನೆಯ ದಿನವಾಗಿದ್ದು, ಈ ಗಡುವನ್ನು ವಿಸ್ತರಿಸುವ ಸಾಧ್ಯತೆಗಳಿಲ್ಲ ಎಂದು ಐಟಿ ಇಲಾಖೆ ಈಗಾಗಲೇ ತಿಳಿಸಿತ್ತು. ಹೀಗಿದ್ದರೂ, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಇತರರು ಇಲ್ಲಿಯವರೆಗೆ ಲೆಕ್ಕಪತ್ರಗಳನ್ನು ಲೆಕ್ಕಪರಿಶೋಧನೆ (ಆಡಿಟ್) ಮಾಡಿಸುವ ಅಗತ್ಯವಿದ್ದಲ್ಲಿ ಅಂತಹವರು ಈ ವರ್ಷದ ಅಕ್ಟೋಬರ್ 31ರ ವೇಳೆಗೆ ರಿಟನ್ಸ್‌ಗಳನ್ನು ಸಲ್ಲಿಸಲು ಅವಕಾಶ ನೀಡಿದ್ದು ಆ ಕುರಿತ ವಿವರ ಇಲ್ಲಿದೆ.
ಅ. 31ರವರೆಗೆ ಸಲ್ಲಿಕೆಗೆ ಅವಕಾಶ

ವೇತನದಾರರಿಗೆ ಜುಲೈ 31ರೊಳಗೆ ಐಟಿ ರಿಟನ್ಸ್ ಸಲ್ಲಿಸಲು ಐಟಿ ಇಲಾಖೆ ಗಡುವು ನೀಡಿದೆ. ಇದೇ ವೇಳೆ ಇಲಾಖೆ, ಲೆಕ್ಕಪತ್ರಗಳ ಪರಿಶೋಧನೆ ನಡೆಸದಿರುವ ಕಾರ್ಪೊರೇಟ್‌ಗಳು ಅಥವಾ ಇತರರು ಅ. 31ರ ವೇಳೆಗೆ ತಮ್ಮ ರಿಟನ್ಸ್‌ಗಳನ್ನು ಸಲ್ಲಿಸಲು ಅವಕಾಶ ನೀಡಿದೆ. ಭಾನುವಾರ ಕೊನೆ ದಿನವಾಗಿದ್ದ ಹಿನ್ನೆಲೆ ಸಾಕಷ್ಟು ವೇತನದಾರರು ಐಟಿಆರ್ ಸಲ್ಲಿಕೆಯಲ್ಲಿ ನಿರತರಾಗಿದ್ದರಿಂದಾಗಿ ಮಧ್ಯಾಹ್ನ 1 ಗಂಟೆಯವರೆಗೆ 19,53,581 ಐಟಿಆರ್‌ಗಳು ಸಲ್ಲಿಕೆಯಾಗಿದ್ದವು ಎಂದು ಇಲಾಖೆ ತಿಳಿಸಿದೆ. ರಿಟನ್ಸ್ ಸಲ್ಲಿಕೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಇಲಾಖೆಯ ಇಮೇಲ್ ವಿಳಾಸ ಅಥವಾ 1800 103 0025/1800 419 0025 ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಿದೆ.

ಗಡುವು ಮೀರಿದರೂ ಸಲ್ಲಿಸದಿದ್ದರೆ ಏನಾಗುತ್ತೆ ?

2021-22ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್‌ನ್ನು ಜು. 31ರ ಗಡುವಿನೊಳಗೆ ಸಲ್ಲಿಸದಿದ್ದಲ್ಲಿ ಸೆಕ್ಷನ್ 234 ಎಫ್‌ನಲ್ಲಿ ದಂಡ ವಿಧಿಸಲಾಗುತ್ತದೆ. ಅದರಂತೆ, ಮೌಲ್ಯಮಾಪನ ವರ್ಷದ (ಅಸೆಸ್ಮೆಂಟ್ ಇಯರ್) ಡಿ. 31ಕ್ಕೂ ಮೊದಲು 5,000 ರೂ.ಗಳ ದಂಡದೊಂದಿಗೆ ಮತ್ತು 10,000 ರೂ.ಗಳ ದಂಡದೊಂದಿಗೆ ಮೌಲ್ಯಮಾಪನ ವರ್ಷದ ಮಾ. 31ರೊಳಗೆ ರಿಟರ್ನ್ಸ್ ಸಲ್ಲಿಕೆ ಮಾಡಲು ಕೊನೆ ಗಡುವು ನೀಡಲಾಗಿದೆ. ಜತೆಗೆ ಗಡುವಿನ ದಿನಾಂಕದೊಳಗೆ ಯಾವುದೇ ವ್ಯಕ್ತ ಐಟಿಆರ್ ಸಲ್ಲಿಸಲು ವಿಫಲರಾದರೆ ಹಾಗೂ ಬಾಕಿ ಪಾವತಿಸದ ತೆರಿಗೆಯನ್ನು ಸೆಕ್ಷನ್ 234 ಎನಲ್ಲಿ ಬಾರಿ ತೆರಿಗೆ ಮೊತ್ತದ ಮೇಲೆ ಗಡುವಿನ ದಿನಾಂಕದಿಂದ ತಿಂಗಳಿಗೆ ಶೇ. 1 ರಷ್ಟು ಬಡ್ಡಿ ವಿಧಿಸಲಾಗುತ್ತದೆ. ತೆರಿಗೆಗೆ ಒಳಪಡುವ ಆದಾಯ ಹೊಂದಿರುವ ವ್ಯಕ್ತಿ ತನ್ನ ಐಟಿಆರ್ ಸಲ್ಲಿಸಲು ವಿಫಲವಾದರೆ ಅಥವಾ ರಿಟರ್ನ್ಸ್‌ನಲ್ಲಿ ತನ್ನ ಆದಾಯ ಕಡಿಮೆ ವರದಿ ಮಾಡಿದ್ದಲ್ಲಿ ಆತ, ಆಕೆ ತಮ್ಮ ಆದಾಯದ ಮೇಲೆ ಪಾವತಿಸಬೇಕಾದ ಒಟ್ಟು ತೆರಿಗೆಯ ಶೇ. 50 ಪಾವತಿಸಬೇಕಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!