ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ಸೆಲೆಬ್ರಿಟಿಗಳು ಫೇಮಸ್ ಆಗೋದಕ್ಕೆ ಮೊದಲ ಕಾರಣ ಸೋಶಿಯಲ್ ಮೀಡಿಯಾ, ಸೆಲೆಬ್ರಿಟಿಗಳಪೋಸ್ಟ್‌ಗಳನ್ನು ಲೈಕ್ ಮಾಡುವ ಅಭಿಮಾನಿಗಳು, ಸೈಲೆಂಟಾಗಿಯೇ ತಮ್ಮ ನೆಚ್ಚಿನ ಸ್ಟಾರ್‌ನ್ನು ಬೆಳೆಸುತ್ತಾರೆ.
ಇದೀಗ ಬಾಲಿವುಡ್ ನಟಿ ಕಾಜೊಲ್ ಸಾಮಾಜಿಕ ಜಾಲತಾಣದಿಂದ ದೊಡ್ಡ ಬ್ರೇಕ್ ಪಡೆದಿದ್ದಾರೆ. ನನ್ನ ಜೀವನದ ಕಷ್ಟಕರ ದಿನಗಳಿವು ಎನ್ನುವ ಪೋಸ್ಟ್ ಮಾಡಿದ್ದು, ಸೋಶಿಯಲ್ ಮೀಡಿಯಾದಿಂದ ಬ್ರೇಕ್ ಪಡೆಯುತ್ತಿದ್ದೇನೆ ಎಂದು ಅನೌನ್ಸ್ ಮಾಡಿದ್ದಾರೆ.
ಇದ್ದಕ್ಕಿದ್ದಂತೆಯೇ ನಟಿಯ ಪೋಸ್ಟ್‌ನಿಂದ ಅಭಿಮಾನಿಗಳು ಶಾಕ್ ಆಗಿದ್ದು, ಆರೋಗ್ಯ ಸಮಸ್ಯೆಯೇನಾದರೂ ಆಗಿದೆಯೇ ಎಂದು ಊಹಿಸಿದ್ದಾರೆ, ಏನೇ ಇರಲಿ ನಿಮ್ಮ ಸಮಯ ನೀವು ತೆಗೆದುಕೊಳ್ಳಿ, ಆದರೆ ಮತ್ತೆ ಇಲ್ಲಿಗೆ ವಾಪಾಸ್ ಬನ್ನಿ ಎಂದು ಅಭಿಮಾನಿಗಳು ಹೇಳಿದ್ದಾರೆ.