ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಗೃಹಲಕ್ಷ್ಮೀ’ ಯೋಜನೆ ಮೂಲಕ ಸರ್ಕಾರ ಮನೆಯಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹಿಂದೆ ಕಾಂಗ್ರೆಸ್ ಹೇಳಿದ್ದೊಂದು ಈಗ ಮಾಡುತ್ತಿರುವುದು ಇನ್ನೊಂದು. ಅವರು ಘೋಷಿಸಿರುವಂತೆ ನಡೆದುಕೊಳ್ಳುತ್ತಿಲ್ಲ.
ಎಲ್ಲಾ ಮನೆ ಯಜಮಾನಿಗೂ 2000 ರೂ. ನೀಡುವುದಾಗಿ ಹೇಳಿದ್ದ ಕಾಂಗ್ರೆಸ್ ಇದೀಗ ಉಲ್ಟಾ ಹೊಡೆಯುತ್ತಿದೆ. ‘ಗೃಹಲಕ್ಷ್ಮೀ’ ಯೋಜನೆ ಜಗಳ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಈ ಹಿಂದೆ ಎಲ್ಲಾ ಮಹಿಳೆಯರಿಗೆ 2,000 ರೂ. ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ ಷರತ್ತುಗಳನ್ನು ವಿಧಿಸಲಾಗಿದೆ. ತೆರಿಗೆ ಪಾವತಿಸುವವರಿಗೆ 2000 ಹಣ ಕೊಡಲ್ಲ ಎಂದು ಹೇಳಿದೆ. ಸರ್ಕಾರ ಅತ್ತೆ ಹಾಗೂ ಸೊಸೆ ಇಬ್ಬರಿಗೂ ಎರಡು ಸಾವಿರ ರೂ. ಹಣ ನೀಡಬೇಕು ಎಂದರು.