ನಾಯಿಮರಿ ಕಾಣೆಯಾಗಿ 15 ದಿನ ಆಯ್ತು, ಬಿಬಿಎಂಪಿ ವಿರುದ್ಧ ನಟಿ ಸುಧಾರಾಣಿ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಸುಧಾರಾಣಿ ಅವರ ಏರಿಯಾದ ಶ್ವಾನ ಗಂಗಮ್ಮ ಕಾಣೆಯಾಗಿ 15 ದಿನಗಳಾಗಿದ್ದು, ಬಿಬಿಎಂಪಿ ಯಾವುದೇ ರೀತಿ ಸಹಾಯ ಮಾಡಿಲ್ಲ ಎಂದು ನಟಿ ಸುಧಾರಾಣಿ ಗರಂ ಆಗಿದ್ದಾರೆ.

ಮನೆಯಲ್ಲಿರುವ ನಾಯಿಗಳ ಜತೆ, ಬೀದಿ ನಾಯಿಗಳನ್ನು ಪ್ರೀತಿಯಿಂದ ಸಾಕುತ್ತಿರುವ ಸುಧಾರಾಣಿ ನಮ್ಮ ಏರಿಯಾ ನಾಯಿ ಮಿಸ್ಸಿಂಗ್ ಎಂದು 15 ದಿನಗಳ ಹಿಂದೆಯೇ ಬಿಬಿಎಂಪಿಗೆ ದೂರು ನೀಡಿದ್ದಾರೆ.

ಇನ್ಸ್ಟಾಗ್ರಾಮ್‌ನಲ್ಲಿ ಎರಡು ಮಿಲಿಯನ್ ಫಾಲೋವರ‍್ಸ್ ಹೊಂದಿರೋ ಸುಧಾರಾಣಿ, ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿದ್ದಾರೆ. ತಮ್ಮ ಖಾತೆಯಿಂದ ಪೋಸ್ಟ್ ಒಂದನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಹಲವು ಬಾರಿ ಹೇಳಿದ್ದೇನೆ, ನಮ್ಮ ನಾಯಿ ಕಳೆದುಹೋಗಿದೆ. ಬಿಬಿಎಂಪಿ ಅವರು ನಾಯಿಗಳನ್ನು ರೀಲೊಕೇಟ್ ಮಾಡಿದಾಗ ನಿಮ್ಮ ಏರಿಯಾದಲ್ಲಿ ನಾಯಿ ಕಾಣಿಸಿದರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ನನ್ನನ್ನು ಟ್ಯಾಗ್ ಮಾಡಿ. ಗಂಗಮ್ಮನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆದಷ್ಟು ಪ್ರಯತ್ನ ಪಟ್ಟಿದ್ದೇವೆ ಆಕೆಯ ಸುಳಿವು ಸಿಕ್ಕಿಲ್ಲ ಎಂದು ಸುಧಾರಾಣಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!