ಮಾಮೂಲಿ ದಿನಗಳಿಗಿಂತ ಚಳಿಗಾಲದಲ್ಲಿ ಚರ್ಮ ಸುಕ್ಕುಗಟ್ಟೋದು, ಹಾಳಾಗೋದು ಹೆಚ್ಚು. ಚಳಿಗಾಲದಲ್ಲಿ ತ್ವಚೆಗೆ ಹೆಚ್ಚು ಕಾಳಜಿ ಬೇಕಾಗುತ್ತದೆ. ಈ ಸಮಯದಲ್ಲಿ ಚರ್ಮವನ್ನು ಚೆನ್ನಾಗಿ ಇಟ್ಟುಕೊಳ್ಳಲು ಹೀಗೆ ಮಾಡಿ..
- ಚಳಿಗಾಳಿಗೆ ಮುಖವನ್ನು ಒಡ್ಡಬೇಡಿ
- ಹೆಚ್ಚು ಬಿಸಿ ನೀರಿನ ಸ್ನಾನ ಬೇಡ
- ಮುಖ ಎಣ್ಣೆಯಾದರೂ ಪರವಾಗಿಲ್ಲ, ಮಾಯಿಶ್ಚರೈಸರ್ ಹಚ್ಚುವುದು ನಿಲ್ಲಿಸಬೇಡಿ.
- ಹೆಚ್ಚೆಚ್ಚು ನೀರು ಕುಡಿಯಿರಿ
- ತುಟಿಗಳಿಗೆ ಹೆಚ್ಚು ಕಾಳಜಿ ನೀಡಿ, ಲಿಪ್ ಬಾಮ್ ಸದಾ ಹಚ್ಚಿ
- ಮನೆಯಲ್ಲಿ ಹ್ಯುಮಿಡಿಫೈರ್ ಇದ್ದರೆ ಬಳಕೆ ಮಾಡಿ
- ಆಗಾಗ ಎಣ್ಣೆಯಲ್ಲಿ ಮಸಾಜ್ ಮಾಡಿ
- ಆರೋಗ್ಯಕರ ಆಹಾರ ಸೇವಿಸಿ
- ತುಪ್ಪ ಊಟದ ಜೊತೆ ಇರಲಿ
- ಚಳಿಗಾಲವಾದರೂ, ಮನೆಯಲ್ಲೇ ಇದ್ದರೂ ಸನ್‌ಸ್ಕ್ರೀನ್ ಬಳಸಿ
- ಸ್ನಾನ ಅಥವಾ ಮುಖ ತೊಳೆದ ಒಂದು ನಿಮಿಷದ ಒಳಗೆ ಮಾಯಿಶ್ಚರೈಸರ್ ಹಚ್ಚಿ
- ಹೆಚ್ಚು ಕೆಮಿಕಲ್ ಇರುವ ಫೇಸ್ ವಾಶ್ ಅಥವಾ ಸೋಪ್ ಬಳಕೆ ಮಾಡಬೇಡಿ