Thursday, February 9, 2023

Latest Posts

500 ರೂ. ಡ್ರಾ ಮಾಡಿದರೆ 2,500 ರೂ.ಸಿಗುತ್ತಿದೆ: ವಿಚಾರ ತಿಳಿದು ಎಟಿಎಂಗೆ ಮುಗಿಬಿದ್ದ ಜನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಎಟಿಎಂನಲ್ಲಿ ನೀವು ಎಂದಾದರೂ 500ರೂ ಬದಲಾಗಿ 2,500ರೂಪಾಯಿ ಪಡೆದಿದ್ದೀರಾ? ಹೈದರಾಬಾದ್ ನಗರದ ಎಟಿಎಂನಲ್ಲಿ ಒಂದು ಬಾರಿ ನೀವು ಹಾಕಿದ ಹಣಕ್ಕಿಂತ ನಾಲ್ಕು ಪಟ್ಟು ಹೆಚ್ಚು ಹಣ ಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ಆ ಎಟಿಎಂಗೆ ಮುಗಿಬಿದ್ದಿದ್ದಾರೆ. ಹೈದರಾಬಾದ್ ಹಳೆ ನಗರದಲ್ಲಿ ವ್ಯಕ್ತಿಯೊಬ್ಬ 500 ರೂ.ಗಳನ್ನು ಡ್ರಾ ಮಾಡಿದರೆ 2,500 ರೂ.ಗಿಂತ ಹೆಚ್ಚು ಹಣ ಪಡೆದಿದ್ದಾರೆ. ಇದರಿಂದ ಆ ವ್ಯಕ್ತಿಗೆ ಆಶ್ಚರ್ಯಗೊಂಡು ಮತ್ತೊಮ್ಮೆ 500 ರೂ. ಡ್ರಾ ಮಾಡಿದರೆ ಮತ್ತೆ 2,500 ರೂ. ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಜನ ಆ ಎಟಿಎಂಗೆ ಮುಗಿಬಿದ್ದರು.

ಶಾಲಿಬಂಡ ಮೂಲದ ವ್ಯಕ್ತಿಯೊಬ್ಬರು ಹರಿಬೌಲಿ ಸ್ಕ್ವೇರ್‌ನಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂಗೆ ಹೋಗಿ ರೂ. 500 ಡ್ರಾ ಮಾಡಲಾಗಿದ್ದು, 500  ರೂ. ಬದಲಿಗೆ 2,500 ರೂ. ಡ್ರಾ ಆಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಆಗಲೇ ವಿಷಯ ತಿಳಿದ ಸ್ಥಳೀಯರು ಎಟಿಎಂಗೆ ಬಂದು ಹಣ ತೆಗೆಯಲು ಪೈಪೋಟಿ ನಡೆಸಿದ್ದಾರೆ. ಈ ವೇಳೆ ಪೊಲೀಸರು ಅಲ್ಲಿಗೆ ಆಗಮಿಸಿ ಜನರನ್ನು ನಿಯಂತ್ರಿಸಿದರು. ಎಟಿಎಂ ಮುಚ್ಚಿದ್ದು, ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!