September 27, 2026
Sunday, September 27, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 42 | ಸ್ವಲ್ಪ ಖಾರ ಇದ್ರೂ ಪರವಾಗಿಲ್ಲ ಅಂದ್ರೆ ಬಿಸಿ ಬಿಸಿ ಮೆಂತ್ಯೆ ಬಾತ್‌ ಇಂದೇ ಟ್ರೈ ಮಾಡಿ

ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಶುಂಠಿ
ಬೆಳ್ಳುಳ್ಳಿ
ಕಾಯಿ
ಕೊತ್ತಂಬರಿ
ಚಕ್ಕೆ
ಲವಂಗ
ಏಲಕ್ಕಿ
ಮರಾಠಿ ಮೊಗ್ಗು
ಸೋಂಪು
ಎಣ್ಣೆ
ತುಪ್ಪ
ಅಕ್ಕಿ

ಮಾಡುವ ವಿಧಾನ
ಮೊದಲು ಮಿಕ್ಸಿಗೆ ಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ, ಬೆಳ್ಳುಳ್ಳಿ ಹಾಗೂ ಹಸಿಮೆಣಸು ಹಾಕಿ ರುಬ್ಬಿ ಇಟ್ಟುಕೊಳ್ಳಿ
ಆನಂತರ ಕುಕ್ಕರ್‌ಗೆ ಎಣ್ಣೆ ಸಾಸಿವೆ ಜೀರಿಗೆ ಸೋಂಪು ಚಕ್ಕೆ ಲವಂಗ ಏಲಕ್ಕಿ ಕಾಳುಮೆಣಸು ಹಾಕಿ ಬಾಡಿಸಿ
ನಂತರ ಪಲಾವ್‌ ಎಲೆ ಹಾಗೂ ಈರುಳ್ಳಿ ಹಾಕಿ ಮಿಕ್ಸ್‌ ಮಾಡಿ
ನಂತರ ಟೊಮ್ಯಾಟೊ ಹಾಗೂ ಬಟಾಣಿ ಹಾಕಿ ಮಿಕ್ಸ್‌ ಮಾಡಿ, ಸೊಪ್ಪು ಹಾಕಿ ಬಾಡಿಸಿ
ಆನಂತರ ಮಿಕ್ಸಿಯ ಮಸಾಲೆ ಹಾಕಿ, ಎಣ್ಣೆ ಬಿಟ್ಟ ನಂತರ ನೀರು, ಅಕ್ಕಿ, ಉಪ್ಪು ಹಾಕಿ
ಕಡೆಗೆ ಕುದಿ ಬಂದ ನಂತರ ಒಂದು ಸ್ಪೂನ್‌ ತುಪ್ಪ ಹಾಕಿ ಲಿಡ್‌ ಕ್ಲೋಸ್‌ ಮಾಡಿ ಎರಡು ವಿಶಲ್‌ ಕೂಗಿಸಿದ್ರೆ ಬಾತ್‌ ರೆಡಿ

Must Read