ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ಬಾಸ್ ಕನ್ನಡ 11ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 29ನೇ ತಾರೀಕಿನಿಂದ ಆರಂಭವಾಗಲಿದೆ. ಇದರ ಮಧ್ಯೆ ನಟ ಸುದೀಪ್ ಸುದ್ದಿಗೋಷ್ಠಿ ನಡೆಸಿ ಮಾತಾಡಿದ್ದಾರೆ.
ಬಿಗ್ಬಾಸ್ ಸಹವಾಸ ಸಾಕು ಅನಿಸಿದ್ದು ನಿಜ. ಅದಕ್ಕೆ ಬೇರೆಯದ್ದೇ ಕಾರಣಗಳು ಇದ್ದವು. ನಮ್ಮಗಳ ಮಧ್ಯೆ ಯಾವುದೇ ಮಸನಸ್ತಾಪ ಇರಲಿಲ್ಲ. ಇದರ ಬದಲಿಗೆ ಸಿನಿಮಾ ಕಡೆ ಒಂದಷ್ಟು ಗಮನ ನೀಡೋಣ ಎಂದಿದ್ದೆ. ಕೊನೆಗೆ ಬಿಗ್ಬಾಸ್ ಟೀಮ್ ನನ್ನ ಮನೆಗೆ ಭೇಟಿ ನೀಡಿ ಒಪ್ಪಿಸಿದ್ರು ಎಂದರು ಸುದೀಪ್.
ಬಿಗ್ಬಾಸ್ ನನ್ನ ಜೀವನದ ಭಾಗ ಆಗಿದೆ. ಕಳೆದ 10 ವರ್ಷಗಳಿಂದ ಬಿಗ್ಬಾಸ್ ನಡೆಸಿಕೊಂಡು ಬಂದಿದ್ದೇನೆ. ಮನೆಗೆ ಬಂದ ಬಿಗ್ಬಾಸ್ ಟೀಮ್ ಎಲ್ಲವೂ ವಿವರಿಸಿದ್ರು. ಬಿಗ್ಬಾಸ್ಗೆ ನನಗೆ ಏನೋ ಒಂದು ರೀತಿ ಸಂಬಂಧ. ಹಾಗಾಗಿ ಬಿಗ್ಬಾಸ್ ಒಪ್ಪಿಕೊಂಡೆ ಎಂದರು.