ನಮಗೆ 4ನೇ ಬಾರಿ ಆಡಳಿತಕ್ಕೆ ಬರುತ್ತೇವೆ ಅನ್ನೋ ಗ್ಯಾರಂಟಿ ಇಲ್ಲ, ಆದರೆ…: ಗಡ್ಕರಿಯ ಹಾಸ್ಯ ಚಟಾಕಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮ್ ದಾಸ್ ಅಠಾವಳೆ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅದೇನೆಂದರೆ, ನಮ್ಮ 4ನೇ ಅವಧಿಯ ಆಡಳಿತಕ್ಕೆ ಯಾವುದೇ ಗ್ಯಾರೆಂಟಿ ಇಲ್ಲದೇ ಇರಬಹುದು ಆದರೆ ರಾಮ್ ದಾಸ್ ಅಠಾವಳೆ ಕೇಂದ್ರ ಸಚಿವರಾಗುವುದು ಮಾತ್ರ ಗ್ಯಾರೆಂಟಿ ಎಂದು ಹೇಳಿದ್ದಾರೆ.

ನಾಗ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಗಡ್ಕರಿ, ಸರ್ಕಾರ ಯಾವುದೇ ಇದ್ದರೂ ಅದರೊಂದಿಗೆ ಮೈತ್ರಿ ಮಾಡಿಕೊಳ್ಳುವುದೂ ಒಂದು ಕಲೆ, ಹಲವು ರಾಜಕಾರಣಿಗಳಿಗೆ ಈ ಕಲೆ ಸಹಜವಾಗಿಯೇ ಬಂದಿರುತ್ತದೆ. ಈ ಪೈಕಿ ಮಹಾರಾಷ್ಟ್ರದ ರಾಮದಾಸ್ ಅಠಾವಳೆ ಸಹ ಒಬ್ಬರು ಎಂದಿದ್ದಾರೆ. ಈ ವೇಳೆ ತಮ್ಮ ಹೇಳಿಕೆಯನ್ನು ತಮಾಷೆ ಎಂದು ಸ್ಪಷ್ಟಪಡಿಸಿದರು.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್ ಪಿಐ) ನಾಯಕರಾಗಿರುವ ಅಠಾವಳೆ, ಕೇಂದ್ರದಲ್ಲಿ 3 ಬಾರಿ ಸಚಿವರಾಗಿದ್ದು, ಬಿಜೆಪಿ ಮರಳಿ ಅಧಿಕಾರಕ್ಕೆ ಬಂದಲ್ಲಿ ಮತ್ತೊಮ್ಮೆ ಕೇಂದ್ರ ಸಚಿವರಾಗುವ ಭರವಸೆ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಸರ್ಕಾರದ ಮಿತ್ರಪಕ್ಷವಾಗಿರುವ ತಮ್ಮ ಪಕ್ಷದ ಆರ್‌ಪಿಐ (ಎ) ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 10 ರಿಂದ 12 ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂದು ಅಠಾವಳೆ ಹೇಳಿದ್ದಾರೆ.

ನಾಗ್ಪುರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಠಾವಳೆ, ಆರ್‌ಪಿಐ-ಎ ತನ್ನ ಪಕ್ಷದ ಚಿಹ್ನೆಯ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸುತ್ತದೆ ಮತ್ತು ವಿದರ್ಭದಲ್ಲಿ ಉತ್ತರ ನಾಗ್ಪುರ, ಉಮ್ರೆಡ್ (ನಾಗ್ಪುರ), ಯವತ್ಮಾಲ್‌ನ ಉಮರ್‌ಖೇಡ್ ಮತ್ತು ವಾಶಿಮ್ ಸೇರಿದಂತೆ ಮೂರರಿಂದ ನಾಲ್ಕು ಸ್ಥಾನಗಳಿಗೆ ಬೇಡಿಕೆ ಇಡಲಿದೆ ಎಂದು ಹೇಳಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!