ಬಿಜೆಪಿ ಶಾಸಕರು, ಸಂಸದರಿಗೆ ಪುರಿಯಲ್ಲಿ ತರಬೇತಿ ಶಿಬಿರ ಕೇಂದ್ರ ಉದ್ಘಾಟಿಸಿದ ಜೆ.ಪಿ.ನಡ್ಡಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇಂದು ಪುರಿಯ ಸ್ವಾಮಿನಾರಾಯಣ ಮುಖ್ಯ ದೇವಾಲಯದಲ್ಲಿ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ಅವರೊಂದಿಗೆ ಬಿಜೆಪಿ ಶಾಸಕರು ಮತ್ತು ಸಂಸದರಿಗೆ ಮೂರು ದಿನಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿದರು.

ಪಕ್ಷದ ಪ್ರತಿನಿಧಿಗಳ ನಾಯಕತ್ವ ಮತ್ತು ಶಾಸಕಾಂಗ ಕೌಶಲ್ಯವನ್ನು ಹೆಚ್ಚಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಬಿಜೆಪಿ ರಾಜ್ಯ ಅಧ್ಯಕ್ಷ ಮನಮೋಹನ್ ಸಮಲ್, ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಅಶ್ವಿನಿ ವೈಷ್ಣವ್, ಜುವಾಲ್ ಓರಂ ಮತ್ತು ಬಿಜೆಪಿ ಶಾಸಕರು ಸೇರಿದಂತೆ ಹಲವಾರು ಪ್ರಮುಖ ನಾಯಕರು ಉದ್ಘಾಟನಾ ಅಧಿವೇಶನದಲ್ಲಿ ಭಾಗವಹಿಸಿದ್ದರು.

ಪಕ್ಷದ ಸಾಂಸ್ಥಿಕ ಚೌಕಟ್ಟನ್ನು ಬಲಪಡಿಸುವುದು ಮತ್ತು ಮುಂಬರುವ ರಾಜಕೀಯ ಸವಾಲುಗಳಿಗೆ ನಾಯಕರನ್ನು ಸಿದ್ಧಪಡಿಸುವುದು ಈ ಶಿಬಿರದ ಗುರಿಯಾಗಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!