ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳವಾರ ಆಲಿಬಾಬಾ ಸಮೂಹವು ಆಂತರಿಕ ಪುನರಚನೆಯನ್ನು ಘೋಷಿಸಿದ ನಂತರ ಹೂಡಿಕೆದಾರರು ಕಂಪನಿಯೆಡೆಗೆ ವಿಶ್ವಾಸ ತೋರಿಸಿದ್ದು ಕಂಪನಿಯ ಹಾಂಕಾಂಗ್ ಷೇರುಗಳು 16.3 ಶೇಕಡಾದಷ್ಟು ಏರಿಕೆಯಾಗಿ ಹಾಂಕಾಂಗ್ ಡಾಲರ್ 98ಕ್ಕೆ ತಲುಪಿವೆ.
ಮಂಗಳವಾರ ಘೋಷಿಸಿದ ಪುನರ್ರಚನೆಯು ಚೀನಿ ಟೆಕ್ ವಲಯದಲ್ಲಿ ವ್ಯಾಪಕವಾಗಿ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡಿದೆ. ಅಲ್ಲದೇ Alibaba ನ ಇ-ಕಾಮರ್ಸ್ ಪ್ರತಿಸ್ಪರ್ಧಿ JD.com Inc ನ ಷೇರುಗಳು 7% ನಷ್ಟು ಹೆಚ್ಚಿವೆ ಮತ್ತು ಗೇಮಿಂಗ್ ದೈತ್ಯ Tencent Holdings Ltd ಬುಧವಾರ ಬೆಳಿಗ್ಗೆ 5% ಜಿಗಿದಿದೆ. ಅಲಿಬಾಬಾದಲ್ಲಿ ಪ್ರಮುಖ ಷೇರುದಾರರಾದ ಸಾಫ್ಟ್‌ಬ್ಯಾಂಕ್ ಗ್ರೂಪ್ ಕಾರ್ಪ್, 6% ರಷ್ಟು ಏರಿಕೆಯಾಗಿದೆ.
ಡೇನಿಯಲ್ ಝಾಂಗ್ ಗ್ರೂಪ್ ಸಿಇಒ ಆಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದಾರೆ ಮತ್ತು ಕಂಪನಿಯನ್ನು ಆರು ಉಪ-ವಿಭಾಗಗಳು ತಮ್ಮದೇ ಆದ ಸಿಇಒಗಳು ಮತ್ತು ಬೋರ್ಡ್‌ಗಳೊಂದಿಗೆ ಮರು ರಚಿಸಲಾಗಿದೆ ಎಂದು ಅಲಿಬಾಬಾ ಮಂಗಳವಾರ ಹೇಳಿದೆ. ಈ ನವೀಕರಣವು ಕಂಪನಿಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ಪುನರ್ರಚನೆ ಎಂದೆನಿಸಿದೆ.