ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ಬನ್ಸ್ ಇಷ್ವ ಪಡುವವರು ಈ ತಿಂಡಿಯನ್ನೊಮ್ಮೆ ಟ್ರೈ ಮಾಡಲೇ ಬೇಕು. ಘಮ ಘಮಿಸುವ ಹಲಸಿನ ಹಣ್ಣಿನ ಬನ್ಸ್ ಒಮ್ಮೆ ಸವಿದರೆ ಮತ್ತೆ ಮತ್ತೆ ಬೇಕೆನಿಸುತ್ತದೆ. ಹಾಗಾದ್ರೆ ಈ ತಿಂಡಿಯನ್ನು ಮಾಡುವುದು ಹೇಗೆ ನೋಡೋಣ.
ಬೇಕಾದ ಸಾಮಗ್ರಿಗಳು:
ಹಣ್ಣು ನುಣ್ಣಗೆ ರುಬ್ಬಿ ಹಲಸಿನ ಹಣ್ಣಿನ ಹಿಟ್ಟು, ಗೋದಿ ಹಿಟ್ಟು ಅಥವಾ ಮೈದಾಹಿಟ್ಟು, ಸಕ್ಕರೆ ಸ್ವಲ್ಪ ,ಸೋಡಾ ಚಿಟಿಕೆ, ಕರಿಯಲು ಬೇಕಾದ ಎಣ್ಣೆ.
ಮಾಡುವ ವಿಧಾನ:
ರುಬ್ಬಿದ ಹಲಸಿನ ಹಣ್ಣಿನ ಹಿಟ್ಟಿಗೆ ಬೇಕಾದಷ್ಟು ಗೋದಿ ಹಿಟ್ಟು, ಸಕ್ಕರೆ, ಸೋಡಾ ಹಾಕಿ ಮಿಶ್ರ ಮಾಡಿ. ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಬೇಕು. ಹಿಟ್ಟನ್ನು ಚೆನ್ನಾಗಿ ನಾದಿ ಚಿಕ್ಕ ಚಿಕ್ಕ ಉಂಡೆ ಮಾಡಿ ಪೂರಿ ಗಾತ್ರಕ್ಕೆ ಲಟ್ಟಿಸಿ, ಎಣ್ಣೆಯಲ್ಲಿ ಕರಿಯಿರಿ. ತೆಂಗಿನಕಾಯಿ, ಸೂಜಿ ಮೆಣಸಿನ ಬಿಳಿ ಚಟ್ನಿಯೊಂದಿಗೆ ಈ ಬನ್ಸ್ ಸೂಪರ್ ಟೇಸ್ಟಿಯಾಗಿರುತ್ತದೆ.