ಜಗದೀಶ್ ಶೆಟ್ಟರ್ ಕೊರಳಲ್ಲಿ ಕಾಂಗ್ರೆಸ್ ಶಾಲು ನೋಡಿ ಕಣ್ಣೀರಿಟ್ಟ ಪತ್ನಿ ಶಿಲ್ಪಾ ಶೆಟ್ಟರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಇತ್ತ ತನ್ನ ಪತಿಯ ಕೊರಳಲ್ಲಿ ಕಾಂಗ್ರೆಸ್ ಶಾಲು ನೋಡಿದ ಪತ್ನಿ ಶಿಲ್ಪಾ ಶೆಟ್ಟರ್ (Shilpa Shettar) ಕಣ್ಣೀರು ಹಾಕಿದ್ದಾರೆ.

ಈ ಬಗ್ಗೆ ಮಾತನಾಡಿದ ಶಿಲ್ಪಾ ಶೆಟ್ಟರ್​, ಶೆಟ್ಟರ್ ಕೊರಳಲ್ಲಿ ಕಾಂಗ್ರೆಸ್ ಬಾವುಟ ನೋಡಿ ನನಗೆ ನೋವಾಯಿತು. ಜೀವನದಲ್ಲಿ ಶಾಲು ಬದಲಾಗತ್ತದೆ ಅನ್ನೋ ಕನಸೆ ಕಂಡಿರಲಿಲ್ಲ. ಕಾಂಗ್ರೆಸ್ ಶಾಲು ಹಾಕಿದ್ದು ನೋಡಿ ಬಹಳ ನೋವಾಯಿತು. ಅದನ್ನು ನೋಡಿ ಕಣ್ಣೀರು ಬಂತು ಎಂದಿದ್ದಾರೆ.

ಜಗದೀಶ್ ಶೆಟ್ಟರ್ ಭ್ರಷ್ಟರಾ, ಸಿಡಿ ಇದೆಯಾ. ದೇವರು ನಮಗೆ ದುಃಖ ತಡೆದುಕೊಳ್ಳುವ ಶಕ್ತಿ ಕೊಡಲಿ. ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಗೆಲ್ಲುವುದು ಖಚಿತ ಎಂದು ಶಿಲ್ಪಾ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!