Friday, March 24, 2023

Latest Posts

ಮೂರುಸಾವಿರ ಮಠದಲ್ಲಿ ಜಗ್ಗಲಗಿ ಹಬ್ಬ, ಸಿಎಂ ಬೊಮ್ಮಾಯಿ ಭಾಗಿ ಸಾಧ್ಯತೆ

ಹೊಸದಿಗಂತ ವರದಿ ಹುಬ್ಬಳ್ಳಿ:

ಬೇಡರ ವೇಷ, ಚರ್ಮವಾದ್ಯ, ಗೊಂಬೆ ಕುಣಿತ, ಹುಲಿ ಕುಣಿತ, ವಾನರ ಹನುಮಾನ ವೇಷದಾರಿ, ನಂದಿ ಹಾಗೂ ನಾಗಾಸಾಧುಗಳೊಂದಿಗೆ ಪರಮೇಶ್ವರ ವೇಷ ಹಾಗೂ ಅಣ್ಣಮ್ಮ ದೇವಿ ತಮಟೆ ವಾದ್ಯಗಳು ಕಲಾ ತಂಡ…

ಇವು ಮಾ. 9 ರಂದು ಇಲ್ಲಿಯ ಮೂರುಸಾವಿರ ಮಠದಲ್ಲಿ ಹುಬ್ಬಳ್ಳಿ ಜಗ್ಗಲಗಿ ಸಮಿತಿಯಿಂದ ಹೋಳಿ ಹಬ್ಬದ ಅಂಗವಾಗಿ ನಡೆಯುವ ಜಗ್ಗಲಗಿ ಹಬ್ಬದಲ್ಲಿ ಈ ವರ್ಷದ ವಿಶೇಷ ಕಲಾ ಪದರ್ಶನ ನಡೆಯಲಿವೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯಪ್ರಧಾನ ಕಾರ್ಯದರ್ಶಿ ಹಾಗೂ ಜಗ್ಗಲಗಿ ಹಬ್ಬದ ಸಂಯೋಜಕ ಮಹೇಶ ಟೆಂಗಿನಕಾಯಿ ತಿಳಿಸಿದರು.

ಮಧ್ಯಾಹ್ನ 3 ರ ಕ್ಕೆ ಜಗ್ಗಲಗಿ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ. 41 ಕಲಾ ತಂಡಗಳು, 235 ಜಗ್ಗಲಗಿ ತಂಡಗಳು, 509 ಕಲಾವಿದರು ಭಾಗವಹಿಸಲಿದ್ದಾರೆ. ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. 20ಕ್ಕೂ ಹೆಚ್ಚು ಮಠಾಶರು ಭಾಗವಹಿಸಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ನಾಯಕರು ಭಾಗವಹಿಸುವ ಸಾಧ್ಯತೆ ಇದೆ ಎಂದರು.

ಹೋಳಿ ಹಬ್ಬ ಮತ್ತು ಚರ್ಮ ವಾದ್ಯಗಳ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಈ ಹಬ್ಬವನ್ನು ಆಯೋಜಿಸಲಾಗಿದೆ. ಮೂರು ಸಾವಿರ ಮಠದಿಂದ ಆರಂಭವಾಗುವ ಜಗ್ಗಲಗಿ ಹಬ್ಬದ ಮೆರವಣಿಗೆ ವಿಕ್ಟೋರಿಯಾ ರಸ್ತೆ, ಬಾನಿ ಓಣಿ, ಸ್ಟೇಷನ್ ರಸ್ತೆ, ಮರಾಠ ಗಲ್ಲಿ, ಬ್ರಾಡ್‌ವೇ, ದುರ್ಗದಬೈಲು, ಬೆಳಗಾಂವ್ ಗಲ್ಲಿ, ಪೆಂಡಾರ ಗಲ್ಲಿ, ತುಳಜಾಭವಾನಿ ವೃತ್ತ, ದಾಜಿಬಾನಪೇಟೆ ಮಾರ್ಗವಾಗಿ ಮತ್ತೆ ಮೂರು ಸಾವಿರ ಮಠ ತಲುಪಲಿದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!