ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿ ಬಾರಿ ತನ್ನ ಅಭಿಮಾನಿಗಳ ಜತೆ ಅಥವಾ ರಾಯರ ಸನ್ನಿಧಿ ಮಂತ್ರಾಲಯದಲ್ಲಿ ಹುಟ್ಟುಹಬ್ಬ ಆಚರಿಸುವ ನಟ ಜಗ್ಗೇಶ್ ಈ ಬಾರಿ ತಮ್ಮ ಜನ್ಮದಿನ ಆಚರಣೆಗೆ ಬೇಡ ಎಂದು ನಿರ್ಧರಿಸಿದ್ದಾರೆ. ಪುನೀತ್ ನಿಧನದ ನೋವು ಮನಸ್ಸಿನಲ್ಲಿಯೇ ಇದೆ, ಪುನೀತ್ ಇಲ್ಲದೆ ಸಂಭ್ರಮ ಪಡೋದು ಸರಿ ಎನಿಸುತ್ತಿಲ್ಲ. ಯಾವ ಸಡಗರಕ್ಕೆ ಹುಟ್ಟುಹಬ್ಬ ಆಚರಿಸಬೇಕು ಎಂದು ಜಗ್ಗೇಶ್ ಬೇಸರಿಸಿಕೊಂಡಿದ್ದಾರೆ.
ಪ್ರತಿ ಮಾರ್ಚ್ 17ಕ್ಕೆ ಪುನೀತ್ ನನಗೆ ತಪ್ಪದೇ ಕರೆ ಮಾಡಿ ವಿಶ್ ಮಾಡುತ್ತಿದ್ದರು. ಈ ಬಾರಿ ಆ ಕರೆ ಬರೋದಿಲ್ಲ. ಮನಸ್ಸು ಮುರಿದಿದೆ. ಈ ಬಾರಿ ಜನ್ಮದಿನ ಆಚರಿಸೋದಿಲ್ಲ ಎಂದು ಹೇಳಿದ್ದಾರೆ.