ಒರಟು ಸ್ವಭಾವದವರನ್ನು ಹ್ಯಾಂಡಲ್ ಮಾಡೋಕೆ ಈ ಟಿಪ್ಸ್ ಸಹಾಯ ಮಾಡಬಹುದು..

ನಿಮಗೆ ಜೀವನದುದ್ದಕ್ಕೂ ಒರಟು ಸ್ವಭಾವದ ಜನ ಸಿಕ್ಕೇ ಸಿಗುತ್ತಾರೆ. ಖಾಸಗಿ ಹಾಗೂ ವೈಯಕ್ತಿಕ, ಯಾವ ಜೀವನದಲ್ಲಿ ಇವರು ಸಿಕ್ಕರೂ ಸಮಸ್ಯೆ ತಪ್ಪಿದ್ದಲ್ಲ. ಇವರನ್ನು ಹ್ಯಾಂಡಲ್ ಮಾಡೋದು ಹೇಗೆ ಅನ್ನೋ ಪ್ರಶ್ನೆ ನಮಗೆ ಬಂದೇ ಬರುತ್ತದೆ. ಇದಕ್ಕೆ ಈ ಟಿಪ್ಸ್ ಸಹಾಯ ಆಗಬಹುದು..

  • ಇದೇನು ಹೊಸಾದಲ್ಲ, ಹೌದು, ಅವರು ರೂಡ್ ಆಗಿ ಬಿಹೇವ್ ಮಾಡುತ್ತಿರುವುದು ಹೊಸತೇನಲ್ಲ ಎಂದು ಸುಮ್ಮನಾಗಿಬಿಡಿ. ಅವರ ಜೊತೆ ವಾಗ್ವಾದಕ್ಕಿಳಿದರೆ ನಿಮ್ಮ ನೆಮ್ಮದಿ ಹಾಳು.
  • ತಡೆದುಕೊಳ್ಳೋಕೆ ಸಾಧ್ಯವೇ ಇಲ್ಲ ಎನಿಸಿದಾಗ ಅವರನ್ನು ನಿಲ್ಲಿಸಿ. ಒರಟುತನ ಅನ್ನೋದು ಒಂದು ರೀತಿ ರೋಗದ ಥರ, ಔಷಧ ಪಡೆಯದಿದ್ದರೆ ಹಬ್ಬುತ್ತಲೇ ಇರುತ್ತದೆ. ಅವರನ್ನು ತಡೆದುಬಿಡಿ.
  • ಅವರ ಮಾತುಗಳನ್ನು ಪರ್ಸನಲಿ ತೆಗೆದುಕೊಳ್ಳಬೇಡಿ. ಅವರು ಬೇಕಂತಲೇ ನಿಮ್ಮ ಪರ್ಸನಲ್ ಲೈಫ್ ಬಗ್ಗೆ ಮಾತನಾಡುತ್ತಾರೆ. ಆದರೆ ಇದನ್ನು ಮನಸ್ಸಿಗೆ ತೆಗೆದುಕೊಳ್ಳುವ ಅವಶ್ಯ ಇಲ್ಲ. ಅವರ ಉದ್ದೇಶ ನಿಮ್ಮನ್ನು ಹರ್ಟ್ ಮಾಡುವುದು ಮಾತ್ರ.
  • ಒರಟು ಸ್ವಭಾವದವರ ನೋಡಿ ಕರುಣೆ ತೋರಿಸಿ, ಅಯ್ಯೋ ಪಾಪ ಎನಿಸುತ್ತಿದೆ ಎನ್ನುವಂತೆ ಬಿಹೇವ್ ಮಾಡಿ. ಅವರಿಗೆ ಜೀವನ ಮಾಡುವುದು ತಿಳಿಯುತ್ತಿಲ್ಲ. ನೀವು ಅವರ ಲೆವೆಲ್‌ಗೆ ಇಳಿಯುವುದು ಅಸಾಧ್ಯ.
  • ಆ ವ್ಯಕ್ತಿ ಒರಟು ಅಲ್ಲ, ಆಗಾಗ ಒರಟರಂತೆ ಆಡುತ್ತಾರೆ ಎಂದಾದರೆ, ಅವರ ಮೊಂಡ ಮಾತುಗಳಿಗೆ ಜೋಕ್ ಮಾಡಿ ನಕ್ಕುಬಿಡಿ. ಯಾರಿಗೆ ಗೊತ್ತು ಅವರೂ ನಕ್ಕು ಸುಮ್ಮನಾಗಬಹುದು.
  • ಅವರು ನಾರ್ಮಲ್ ಮೂಡ್‌ನಲ್ಲಿ ಇದ್ದಾಗ ಕೂರಿಸಿಕೊಂಡು ಮಾತನಾಡಿ, ಅವರ ಮಾತುಗಳಿಂದ ಇತರರಿಗೆ ಏನನ್ನಿಸುತ್ತದೆ ಎಂದು ಅರ್ಥ ಮಾಡಿಸಿ.
  • ನಿಮ್ಮ ಬಗ್ಗೆ ನೀವು ಹೆಚ್ಚು ಅವರು ಬಳಿ ಹೇಳಿಕೊಳ್ಳಬೇಕಿಲ್ಲ, ನೀವು ಅವರಿಗೆ ರೋಲ್ ಮಾಡೆಲ್ ಆಗಿ. ನಿಮ್ಮನ್ನು ನೋಡಿ ಅವರು ಕಲಿಯಲಿ.

 

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!