ಪ್ಯಾಲೆಸ್ತೇನ್ ವಿರುದ್ಧದ ಪ್ರತಿಭಟನೆಯಲ್ಲಿ ಇಸ್ರೇಲ್ ಬೆಂಬಲಿಗರಿಂದ ಮೊಳಗಿತು ‘ಜೈ ಶ್ರೀ ರಾಮ್’ ಘೋಷಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಅಮೆರಿಕದ ವಿವಿಧ ಕ್ಯಾಂಪಸ್‌ಗಳಲ್ಲಿ ನಡೆಯುತ್ತಿರುವ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ ನಡೆಯುತ್ತಿದ್ದು, ಈ ಮಧ್ಯೆ ಇದಕ್ಕೆ ವಿರುದ್ಧವಾಗಿ ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ (UCLA) ಇಸ್ರೇಲ್ ಬೆಂಬಲಿಗರು ಮೆರವಣಿಗೆ ನಡೆಸಿದ್ದಾರೆ.ಈ ವೇಳೆ ಇಸ್ರೇಲ್ ಬೆಂಬಲಿಗರು ಜೈ ಶ್ರೀ ರಾಮ್ ಎಂಬ ಘೋಷಣೆ (Jai Shri Ram Slogan) ಕೂಗಿದ್ದಾರೆ.

ಯುಸಿಎಲ್‌ಎಯಲ್ಲಿ ಪ್ಯಾಲೆಸ್ತೀನ್‌ ಪರ ಮತ್ತು ಇಸ್ರೇಲ್ ಪರ ಪ್ರತಿಭಟನಾಕಾರರ ನಡುವಿನ ಘರ್ಷಣೆಗಳು ತೀವ್ರಗೊಂಡಿದ್ದವು. ಬ್ಲೂಮಿಂಗ್ಟನ್‌ನ ಇಂಡಿಯಾನಾ ವಿಶ್ವವಿದ್ಯಾಲಯ, ಅರಿಜೋನಾ ಸ್ಟೇಟ್ ಯೂನಿವರ್ಸಿಟಿ ಮತ್ತು ಸೇಂಟ್ ಲೂಯಿಸ್‌ನ ವಾಷಿಂಗ್ಟನ್ ವಿಶ್ವವಿದ್ಯಾಲಯದಂತಹ ಇತರ ಕ್ಯಾಂಪಸ್‌ಗಳಲ್ಲಿಯೂ ಇದೇ ರೀತಿಯ ದೃಶ್ಯಗಳನ್ನು ಕಂಡು ಬಂದಿವೆ.
ಈ ಗೊಂದಲದ ಮಧ್ಯೆ ಅಮೆರಿಕದ ರಾಷ್ಟ್ರೀಯವಾದಿಯೊಬ್ಬರು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುವ ಮೂಲಕ ಗಮನ ಸೆಳೆದಿದ್ದಾರೆ.

ಯುಸಿಎಲ್‌ಎಯ ಕಾರ್ಯತಂತ್ರದ ಸಂವಹನಗಳ ಉಪಕುಲಪತಿ ಮೇರಿ ಒಸಾಕೊ ಈ ಬಗ್ಗೆ ಮಾತನಾಡಿ, ʼʼಎರಡೂ ಕಡೆಯ ಪ್ರತಿಭಟನಾಕಾರರು ವಾಗ್ವಾದಗಳಲ್ಲಿ ತೊಡಗಿದ್ದರು. ಜತೆಗೆ ಘರ್ಷಣೆಯೂ ನಡೆಯಿತು. ಎರಡೂ ಕಡೆಯವರ ಘೋಷಣೆಗಳು ಮುಗಿಲು ಮುಟ್ಟಿದ್ದವುʼʼ ಎಂದು ವಿವರಿಸಿದ್ದಾರೆ. ‘ಯುಸಿಎಲ್‌ಎಯಲ್ಲಿ ಇದುವರೆಗೆ ಅನೇಕ ಶಾಂತಿಯುತ ಪ್ರತಿಭಟನೆ ನಡೆದಿದ್ದವು. ಆದರೆ ಇದೀಗ ಇಲ್ಲಿ ಭುಗಿಲೆದ್ದ ಹಿಂಸಾಚಾರ ತೀವ್ರ ನೋವುಂಟು ಮಾಡಿದೆʼʼ ಎಂದು ಹೇಳಿದ್ದಾರೆ.

ಕಳೆದ ವಾರ ಅಮೆರಿಕದ ಕ್ಯಾಂಪಸ್‌ಗಳಲ್ಲಿ ವ್ಯಾಪಕವಾಗಿ ಪ್ಯಾಲೆಸ್ತೀನ್‌ ಪರ ಪ್ರತಿಭಟನೆಗಳು ನಡೆದವು. ಈ ಸಂಬಂಧ ಅನೇಕರನ್ನು ಬಂಧಿಸಲಾಗಿದೆ. ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯವೊಂದರಿಂದಲೇ 100ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಯೇಲ್ ವಿಶ್ವವಿದ್ಯಾಲದಿಂದಲೂ ಅನೇಕರನ್ನು ವಶಕ್ಕೆ ಪಡೆಯಲಾಗಿದೆ. ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದಲೂ ಪ್ರತಿಭಟನಾಕಾರರನ್ನು ಸೆರೆ ಹಿಡಿಯಲಾಗಿದೆ. ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿನ ಪ್ರತಿಭನಾಕಾರರನ್ನು ಬಲವಂತವಾಗಿ ಚದುರಿಸಲು ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು.

ಪ್ಯಾಲೆಸ್ತೀನ್‌ ವಿರುದ್ಧ ನಡೆಸುತ್ತಿರುವ ಯುದ್ಧವನ್ನು ಇಸ್ರೇಲ್ ನಿಲ್ಲಿಸಬೇಕು. ಇಸ್ರೇಲ್‌ಗೆ ಅಮೆರಿಕದ ಮಿಲಿಟರಿ ಸಹಾಯವನ್ನು ಕೊನೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಈ ರೀತಿಯ ಪ್ರತಿಭಟನೆಗಳು ಶಿಕ್ಷಣಕ್ಕೆ ಅಡ್ಡಿಪಡಿಸುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!