September 28, 2026
Monday, September 28, 2026
spot_img

ಸಗರ ನಾಡಿನಲ್ಲಿ ಮೊಳಗಿದ ‘ಜೈ ಶ್ರೀರಾಮ್’: ಬೃಹತ್ ಹಿಂದೂ ಮಹಾ ಸಮಾವೇಶಕ್ಕೆ ಚಾಲನೆ

ಹೊಸದಿಗಂತ ವರದಿ ಯಾದಗಿರಿ:

ಯಾದಗಿರಿ ಜಿಲ್ಲೆಯ ಸಗರನಾಡಿನ ಹೊಸ್ತಿಲಿನ ಶಹಾಪುರ ನಗರದ ಸಿಬಿ ಮೈದಾನದಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಮಹಾ ಸಮಾವೇಶ ಸೋಮವಾರ ಸಂಜೆ ಗೋಧೂಳಿ ಸಮಯದಲ್ಲಿ ಸಾವಿರಾರು ಹಿಂದೂ ಅಭಿಮಾನಿಗಳ ಸಮ್ಮುಖದಲ್ಲಿ ಚಾಲನೆ ದೊರೆಯಿತು.

ಅದೃಶ್ಯ ಕಾಡ ಸಿದ್ದೇಶ್ವರ ಮಠದ ಶ್ರೀಗಳು ಹಿತೋಪದೇಶ ನೀಡಿದರು.

ಇದನ್ನೂ ಓದಿ:

ಶ್ರೀಕಂಠ ಶಿವಾಚಾರ್ಯರು ನಾಗಣಸೂರ ಮಾತನಾಡಿ, ಆದಿ ಕಾಲದಿಂದಲೂ ನಮ್ಮ ಸನಾತನ ಹಿಂದೂ ಧರ್ಮದ ಬಗ್ಗೆ ಅನೇಕ ವಿಧ್ವಂಸಕ ಮನಸ್ಥಿತಿಗಳು ಅವಹೇಳನ ಮಾತನಾಡುತ್ತಲೇ ಬರುತ್ತಿದ್ದಾರೆ. ಇಂದಿನ ಯುವ ಯುವಕರು ಇಂಥ ಮನಸ್ಥಿತಿ ಉಳ್ಳ ಕಿಡಿಗೇಡಿಗಳ ಬಗ್ಗೆ ಜಾಗೃತರಾಗಬೇಕಾದ ಅವಶ್ಯಕತೆ ಇದೆ. ಧರ್ಮ‌ ರಕ್ಷಣೆಗೆ ಪ್ರತಿಯೊಬ್ಬ ಹಿಂದೂ ಸಿಡಿದೇಳಬೇಕಿದೆ ಎಂದರು.

Must Read