September 27, 2026
Sunday, September 27, 2026
spot_img

ವಂಚನೆ ಪ್ರಕರಣ: 16 ವರ್ಷದಿಂದ ತಲೆಮರಿಸಿಕೊಂಡಿದ್ದ ಆರೋಪಿ ಕೊನೆಗೂ ಅರೆಸ್ಟ್

ಹೊಸದಿಗಂತ ವರದಿ ಹುಬ್ಬಳ್ಳಿ:

ಕಂಪನಿಯೊಂದಕ್ಕೆ ಮೋಸ ಮಾಡಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಕೈಗೆ ಸಿಗದೆ 16 ವರ್ಷಗಳ ಕಾಲ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಗ್ರಾಮೀಣ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧಾರವಾಡ ಕಮಲಾಪೂರದ ಲೋಕೇಶ ಭೀಮಕ್ಕನವರ ಬಂಧಿತ ಆರೋಪಿ.

ಸೀಜ್ ಮಾಡಿದ್ದ ಲಾರಿಗೆ ನಕಲಿ ನಂಬರ್ ಪ್ಲೇಟ್

ಇತ 2010ರಲ್ಲಿ ಶ್ರೀರಾಮ್ ಫೈನಾನ್ಸ್‌ನಲ್ಲಿ ಸೀಜ್ ಮಾಡಿ ನಿಲ್ಲಿಸಿದ್ದ ಲಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಕಾರ್ಗೋ ಕ್ಯಾರಿಯರ್ ಟ್ರಾನ್ಸ್‌ಪೋರ್ಟ್ ಕಂಪನಿ ಮ್ಯಾನೇಜರ್‌ಗೆ ನಂಬಿಸಿದ್ದಾನೆ. ಬಳಿಕ ಕಂಪನಿಯಿಂದ 14,87,289 ರೂ. ಮೌಲ್ಯದ ಸೋಪು, ಪೌಡರ್ ಹಾಗೂ ಇನ್ನಿತರ ವಸ್ತುಗಳನ್ನು ಪಡೆದು ಬೇರಡೆ ಮಾರಾಟ ಮಾಡಿ ವಂಚಿಸಿದ್ದ.

ಇದನ್ನೂ ಓದಿ:

ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇದೀಗ ಆರೋಪಿಯನ್ನು ಮತ್ತೆ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Must Read