Wednesday, October 5, 2022

Latest Posts

ಜೈ ಶ್ರೀರಾಮ್ ಎಂದ ನವೀನ್ ಜಿಂದಾಲ್ ಗೆ ಬಂತು ಮತ್ತೆ ಶಿರಚ್ಛೇದನದ ಬೆದರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡಿದ್ದ ನವೀನ್ ಜಿಂದಾಲ್ ಗೆ ಈಗಾಗಲೇ ಹಲವು ಬೆದರಿಕೆ ಬಂದಿದೆ. ಇದೀಗ ಮತ್ತೆ ಸರ್ ತನ್ ಸೇ ಜುದಾ ಮಾಡುವುದಾಗಿ ಬೆದರಿಕೆ ಕರೆಯೊಂದು ಬಂದಿದೆ.

ಈ ಹಿಂದೆ ವಿವಾದಾತ್ಮಕ ಹೇಳಿಕೆಯಿಂದ ನವೀನ್ ಜಿಂದಾಲ್‌ರನ್ನು ಬಿಜೆಪಿ ಈಗಾಗಲೇ ಪಕ್ಷದಿಂದ ಉಚ್ಚಾಟಿಸಿದೆ.

 

ನೂಪುರ್ ಶರ್ಮಾ ಬೆನ್ನಲ್ಲೇ ನವೀನ್ ಜಿಂದಾಲ್ ಕೂಡ ವಿವಾದಕ್ಕೆ ಸಿಲುಕಿದ್ದರು. ಈ ಘಟನೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನವೀನ್ ಜಿಂದಾಲ್ ಹಲವು ಬೆದರಿಕೆ ಎದುರಿಸಿದ್ದಾರೆ. ವಿವಾದ ಬಳಿಕ ನವೀನ್ ಜಿಂದಾಲ್‌ಗೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಇತ್ತೀಚೆಗೆ ನವೀನ್ ಜಿಂದಾಲ್ ಜೈ ಶ್ರೀರಾಮ್ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ವ್ಯಕ್ತಿಯೊಬ್ಬ ಸರ್ ತನ್ ಸೇ ಜುದಾ ಎಂದು ಪ್ರತಿಕ್ರಿಯಿಸಿದ್ದಾನೆ.

ಈ ಕುರಿತು ನವೀನ್ ಜಿಂದಾಲ್ ದೆಹಲಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ಇದರ ಬೆನ್ನಲ್ಲೆ ಜಿಂದಾಲ್ ಪೊಲೀಸ್ ಭದ್ರತೆಯನ್ನು ಹೆಚ್ಚಿಸಿದೆ. ಇತ್ತೀಚಗೆ ಹಲವು ಬಾರಿ ನವೀನ್ ಜಿಂದಾಲ್ ಶಿರಚ್ಛೇದನ ಶಿಕ್ಷೆ ಬೆದರಿಕೆ ಎದುರಿಸಿದ್ದಾರೆ. ಇದೀಗ ಮತ್ತೆ ಇದೇ ರೀತಿ ಬೆದರಿಕೆ ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!