Wednesday, December 6, 2023

Latest Posts

ದೃಷ್ಟಿ ಹೀನತೆ ಸಮಸ್ಯೆನಾ..? ಕಾರಣ/ಪರಿಹಾರಗಳು ಇಲ್ಲಿವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಂತ್ರಜ್ಞಾನದ ಬೆಳವಣಿಗೆಯಿಂದ ಮೊಬೈಲ್ ಫೋನ್, ಕಂಪ್ಯೂಟರ್ ಬಳಕೆ ಹೆಚ್ಚಿದ್ದು, ಕೆಲಸದ ಸಮಸ್ಯೆ, ಆಹಾರ ಪದ್ಧತಿ, ಕಣ್ಣಿನ ಆರೋಗ್ಯದ ಕಡೆ ಗಮನ ಹರಿಸದಿರುವುದು ಇತ್ಯಾದಿ ಬೆಳವಣಿಗೆಗಳು ಕಣ್ಣಿನ ಸಮಸ್ಯೆಗೆ ಕಾರಣವಾಗುತ್ತಿದೆ. ಅನೇಕ ಜನರು ಕಣ್ಣಿನ ನೋವು, ತುರಿಕೆ, ಮಸುಕಾದ ದೃಷ್ಟಿ ಮತ್ತು ಮಂದ ದೃಷ್ಟಿ ಮುಂತಾದ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ.

ಅನೇಕರಿಗೆ ಚಿಕ್ಕ ವಯಸ್ಸಿಗೆ ಕಣ್ಣಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನ ಮಕ್ಕಳೂ ಕನ್ನಡಕ ಧರಿಸುತ್ತಾರೆ. ಕಣ್ಣಿಗೆ ಹಿತಕರವಾದ ಆಹಾರ ಸೇವನೆಯ ನಿರ್ಲಕ್ಷ್ಯವೇ ಮುಖ್ಯ ಕಾರಣ. ಕಣ್ಣಿನ ಆರೋಗ್ಯಕ್ಕೆ ಉತ್ತಮವಾದ ವಿಟಮಿನ್ ಎ ಕೊರತೆಯಿಂದ ವಿವಿಧ ಕಣ್ಣಿನ ಕಾಯಿಲೆಗಳು ಉಂಟಾಗುತ್ತವೆ.

ಕ್ಯಾರೆಟ್, ಎಲೆಕೋಸು, ಪಪ್ಪಾಯಿ, ಬಾಳೆಹಣ್ಣು ಮತ್ತು ಸೊಪ್ಪು-ತರಕಾರಿಗಳು ವಿಟಮಿನ್ ʻಎʼ ಯ ಸಮೃದ್ಧ ಮೂಲಗಳಾಗಿವೆ. ಅವುಗಳಲ್ಲಿ ಒಳಗೊಂಡಿರುವ ಬೀಟಾ-ಕ್ಯಾರೋಟಿನ್ ನಿಂದ ವಿಟಮಿನ್ ಎ ಪಡೆಯಲಾಗುತ್ತದೆ. ಹಾಲು, ಬೆಣ್ಣೆ, ಮೊಟ್ಟೆ ಮತ್ತು ಮೀನುಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ವಿಟಮಿನ್ ಎ ಕೊರತೆಯು ಮಾನವ ದೇಹದ ಮೇಲೆ, ವಿಶೇಷವಾಗಿ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ.

ವಿಟಮಿನ್ ಎ ಕೊರತೆಯು ಕಣ್ಣಿನ ಬಿಳಿ ಭಾಗ ಒಣಗಿದಂತೆ ಕಾಣುವುದು. ಕಪ್ಪು ಭಾಗ  ಹೊಳಪನ್ನು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಬಹುದು. ಕಣ್ಣಿನ  ಕಪ್ಪು ಭಾಗದ  ಮೂಲಕ ಬೆಳಕಿನ ಕಿರಣಗಳು ರೆಟಿನಾವನ್ನು ಸ್ಪಷ್ಟವಾಗಿ ತಲುಪುವುದಕ್ಕೆ ಸಾಧ್ಯವಾಗಲ್ಲ.  ಆಗ ಕಣ್ಣುಗಳಲ್ಲಿ ತುರಿಕೆ, ಸರಿಯಾಗಿ ನೋಡಲು ಸಾಧ್ಯವಾಗದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ವಿಟಮಿನ್ ಎ ಕೊರತೆಯಿರುವವರಲ್ಲಿ ಗಾಯಗಳು ಬೇಗ ವಾಸಿಯಾಗದೆ ಹಲ್ಲಿನ ಉದುರುವಿಕೆಗೆ ಕಾರಣವಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!