ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಸರ್ಕಾರ ಆಡಳಿತಕ್ಕೆ ಬಂದ ನಂತರ ದೇಶದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಹೆಚ್ಚಾಗಿದ್ದು, ಕಳೆದ 2.5 ವರ್ಷಗಳಲ್ಲಿ 5.77 ಕೋಟಿ ಮನೆಗಳಿಗೆ ಶುದ್ದ ಕುಡಿಯುವ ನೀರಿನ ಸಂಪರ್ಕ ಒದಗಿಸುವ ಮೂಲಕ ಭಾರತದ ಹೊಸ ಮೈಲಿಗಲ್ಲು ಸಾಧಿಸಿದೆ.
2019ರಲ್ಲಿ ಪ್ರಾರಂಭವಾದ ಜಲ್ ಜೀವನ್ ಮಿಷನ್ ಯೋಜನೆ ಈಗ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. 2019ಕ್ಕೂ ಮುಂಚೆ 19.27 ಕೋಟಿ ಮನೆಗಳಲ್ಲಿ ಕೇವಲ 3.23 ಕೋಟಿ ಮನೆಗಳಿಗೆ ಮಾತ್ರ ನೀರಿನ ಸೌಕರ್ಯ ಮಾಡಲಾಗಿತ್ತು. ಆದರೆ ಈಗ 5.77 ಕೋಟಿ ಮನೆಗಳಿಗೆ ನೀರು ಪೂರೈಕೆ ಆಗಿದ್ದು, ಈ ಮೂಲಕ 9 ಕೋಟಿ ಗ್ರಾಮೀಣ ವಸತಿಗಳಿಗೆ ನೀರಿನ ಸಂಪರ್ಕ ಒದಗಿಸಲಾಗಿದೆ ಎಂದು ಜಲ ಶಕ್ತಿ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ 2.5 ವರ್ಷಗಳಲ್ಲಿ 98 ಜಿಲ್ಲೆಗಳು, 1,129 ಬ್ಲಾಕ್, 66,067 ಗ್ರಾ.ಪಂ. ಮತ್ತು 1,36,135 ಗ್ರಾಮಗಳು ಹರ್ ಘರ್ ಜಲ್ ಆಗಿವೆ ಎಂದು ಸಚಿವಾಲಯ ತಿಳಿಸಿದೆ.
ಪಂಜಾಬ್ (ಶೇ. 99), ಹಿಮಾಚಲ ಪ್ರದೇಶ (ಶೇ. 92.4), ಗುಜರಾತ್ (ಶೇ. 92) ಮತ್ತು ಬಿಹಾರ (ಶೇ. 90) ರಾಜ್ಯಗಳು 2022 ರಲ್ಲಿ ‘ಹರ್ ಘರ್ ಜಲ್’ ಆಗಲಿವೆ ಎಂದಿದೆ.
ಮೋದಿ ಅವರ ಐದು ವರ್ಷಗಳ ಅವಧಿಯಲ್ಲಿ ಪ್ರತಿ ಗ್ರಾಮೀಣ ಮನೆಗಳಿಗೆ ನಲ್ಲಿ ನೀರು ಸರಬರಾಜು ಒದಗಿಸುವ ಮಹತ್ಕಾರ್ಯವನ್ನು ಸಾಧಿಸಲು 3.60 ಲಕ್ಷ ಕೋಟಿ ರೂ. ನಿಗದಿಪಡಿಸಲಾಗಿದೆ.