ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದ್ದಕ್ಕಿದ್ದಂತೆಯೇ ನೂರಾರು ಪಕ್ಷಿಗಳು ಆಕಾಶದಿಂದ ಕೆಳಕ್ಕೆ ಬಿದ್ದ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ. ಮೆಕ್ಸಿಕೋದಲ್ಲಿ ಘಟನೆ ನಡೆದಿದ್ದು, ಹಳದಿ ಬಣ್ಣದ ತಲೆಯುಳ್ಳ ಕಪ್ಪು ಪಕ್ಷಿಗಳ ಹಿಂಡು ಏಕಾಏಕಿ ಆಕಾಶದಿಂದ ಕೆಳಕ್ಕೆ ಬಿದ್ದಿದೆ.
WARNING: GRAPHIC CONTENT
Security footage shows a flock of yellow-headed blackbirds drop dead in the northern Mexican state of Chihuahua pic.twitter.com/mR4Zhh979K
— Reuters (@Reuters) February 14, 2022
ಸಿಸಿಟಿವಿ ಕ್ಯಾಮೆರಾದಲ್ಲಿ ವಿಡಿಯೋ ಫೂಟೇಜ್ ದೊರಕಿದ್ದು, ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಶೇರ್ ಆಗುತ್ತಿದ್ದು, ಇದಕ್ಕೆ ಕಾರಣ ಏನು ಎಂದು ತಿಳಿದಿಲ್ಲ. ಒಂದೇ ಸಲಕ್ಕೆ ಸಾವಿರಾರು ಪಕ್ಷಿಗಳು ಭೂಮಿಗೆ ಬಿದ್ದ ಕಾರಣ ಹಲವಾರು ಪಕ್ಷಿಗಳು ಮೃತಪಟ್ಟಿವೆ.
100 ಕ್ಕೂ ಹೆಚ್ಚು ಪಕ್ಷಿಗಳ ಮೃತದೇಹ ರಸ್ತೆಯಲ್ಲಿ ದೊರಕಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.