ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ: ಒಬ್ಬ ವ್ಯಕ್ತಿ ಸಾವು, 80 ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೊಂಗಲ್ ಆಚರಣೆ ಪ್ರಯುಕ್ತ ತಮಿಳುನಾಡಿನ ಮಧುರೈ ನ ಆವನಿಯಪುರಂ ಪ್ರದೇಶದಲ್ಲಿ ನಡೆದ ಜಲ್ಲಿಕಟ್ಟು ಕ್ರೀಡೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಜಲ್ಲಿ ಕಟ್ಟು ಕ್ರೀಡೆಯಲ್ಲಿ 80 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 38 ಮಂದಿ ಗೂಳಿ ಪಳಗಿಸುವವರು, 24 ಗೂಳಿ ಮಾಲಿಕರು ಹಾಗೂ 18 ಪ್ರೇಕ್ಷಕರು ಸೇರಿದ್ದಾರೆ. ಕೊಬ್ಬಿದ ಗೂಳಿಗಳನ್ನು ಪಳಗಿಸುವ ಪ್ರಯತ್ನದಲ್ಲಿ ಅನೇಕರು ವಿಫಲಗೊಂಡಿದ್ದು, ಗೂಳಿಗಳು ಅವರನ್ನು ಹಿಮೆಟ್ಟಿಸುತ್ತಾ ಮುಂದಕ್ಕೆ ಓಡಿದವು. ಈ ಸ್ಪರ್ಧೆಯಲ್ಲಿ 80 ಮಂದಿ ತೀವ್ರವಾಗಿ ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.
ಜಲ್ಲಿಕಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಮಾರು 5 ಸಾವಿರಕ್ಕೂ ಹೆಚ್ಚು ಜನ ನೋಂದಾಯಿಸಿಕೊಂಡಿದ್ದರು. ಕೋವಿಡ್ ಕಾರಣದಿಂದ ಈ ಬಾರಿ ಅತಿಥಿಗಳು ಪಾಲ್ಗೊಂಡಿರಲಿಲ್ಲ.
ತಮಿಳುನಾಡಿನಲ್ಲಿ ಗೂಳಿ ಕಾಳಗ ಕೇವಲ ಕ್ರೀಡೆ ಮಾತ್ರವಾಗದೆ ಸಂಕ್ರಾಂತಿಯ ಹಬ್ಬದ ಒಂದು ಸಾಂಸ್ಕೃತಿಕ ಆಚರಣೆ ಆಗಿದೆ. ಈ ಕ್ರೀಡೆಯ ಆಯೋಜಕರು ಚಿನ್ನ, ಬೆಳ್ಳಿ, ಕಾರುಗಳನ್ನು ಬಹುಮಾನವಾಗಿ ಘೋಷಿಸುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!