ಇಸ್ರೋದ ಹೊಸ ಮುಖ್ಯಸ್ಥರ ಬಗ್ಗೆ ನೀವು ತಿಳಿದಿರಬೇಕಾದ ಸಂಗತಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಕೆಟ್ ವಿಜ್ಞಾನಿ ಎಸ್. ಸೋಮನಾಥ್ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ನೂತನ ಮುಖ್ಯಸ್ಥ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಹೊಸ ಮುಖ್ಯಸ್ಥರ ಬಗ್ಗೆ ನೀವು ತಿಳಿದಿರಬೇಕಾದ ಸಂಗತಿಗಳು ಇಲ್ಲಿವೆ..

  • ಸೋಮನಾಥ್ ಅವರು ಜನವರಿ 2018 ರಿಂದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ (ವಿಎಸ್‌ಎಸ್‌ಸಿ) ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
  • ಎರಡೂವರೆ ವರ್ಷಗಳ ಕಾಲ ವಲಿಯಾಮಾಲದ ‘ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್’ ಸೆಂಟರ್‌ನಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
  • ಸೋಮನಾಥ್ ಅವರು ಕೊಲ್ಲಂನ ಟಿಕೆಎಂ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮತ್ತು ಬೆಂಗಳೂರಿನ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್‌ನಿಂದ ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.’ಸ್ಟ್ರಕ್ಚರ‍್ಸ್, ಡೈನಾಮಿಕ್ಸ್ ಮತ್ತು ಕಂಟ್ರೋಲ್’ನಲ್ಲಿ ಪರಿಣತಿ, ಚಿನ್ನದ ಪದಕ.
  • 1985ರಲ್ಲಿ ವಿಎಸ್‌ಎಸ್‌ಸಿಗೆ ಸೇರ್ಪಡೆ. ಆರಂಭಿಕ ಹಂತದಲ್ಲಿ ಪಿ ಎಸ್ ಎಲ್ ವಿ ಜೋಡಣಾ ತಂಡದ ನಾಯಕರಾಗಿದ್ದರು.
  • ಸೋಮನಾಥ್ ಅವರು ಉಡಾವಣಾ ವಾಹನಗಳ ಸಿಸ್ಟಮ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಪರಿಣಿತರು.
  • ಪಿಎಸ್‌ಎಲ್‌ವಿ ಮತ್ತು ಜಿಎಸ್‌ಎಲ್‌ವಿ ಎಮ್‌ಕೆIII ನ ರಚನೆ, ಪ್ರೊಪಲ್ಷನ್ ಹಂತಗಳ ವಿನ್ಯಾಸ, ರಚನಾತ್ಮಕ ಮತ್ತು ರಚನಾತ್ಮಕ ಡೈನಾಮಿಕ್ಸ್ ವಿನ್ಯಾಸಗಳು, ಪ್ರತ್ಯೇಕ ವ್ಯವಸ್ಥೆಗಳು, ವಾಹನ ಜೋಡಣೆ ಮತ್ತು ಜೋಡಣೆ ಕಾರ್ಯವಿಧಾನಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ.
  • ಆಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದಿಂದ ‘ಸ್ಟೇಸ್ ಗೋಲ್ಡ್ ಮೆಡಲ್ ‘ಅವಾರ್ಡ್ಇ
  • ಸ್ರೋದಿಂದ ‘ಮೆರಿಟ್ ಅವಾರ್ಡ್’,’ಪರ್ಫಾಮೆನ್ಸ್ ಎಕ್ಸ್‌ಲೆನ್ಸ್ ಅವಾರ್ಡ್’ ಮತ್ತು ಜಿಎಸ್‌ಎಲ್‌ವಿ ಎಮ್‌ಕೆIII ಅಭಿವೃದ್ಧಿಗಾಗಿ ‘ಟೀಮ್ ಎಕ್ಸ್‌ಲೆನ್ಸ್ ಅವಾರ್ಡ್’ ಪಡೆದಿದ್ದಾರೆ.
  • ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್, ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ, ಆಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ, ಇಂಟರ್‌ನ್ಯಾಷನಲ್ ಅಕಾಡೆಮಿ ಆಫ್ ಅಸ್ಟ್ರೋನಾಟಿಕ್ಸ್‌ನ ಸದಸ್ಯರಾಗಿದ್ದಾರೆ.
  • ಇಂಟರ್‌ನ್ಯಾಷನಲ್ ಆಸ್ಟ್ರೋನಾಟಿಕಲ್ ಫೆಡರೇಷನ್ ಬ್ಯೂರೋದಲ್ಲಿಯೂ ಇದ್ದಾರೆ ಹಾಗೂ ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದಿಂದ ‘ರಾಷ್ಟ್ರೀಯ ಏರೋನಾಟಿಕ್ಸ್ ಪ್ರಶಸ್ತಿ’ ಪಡೆದಿದ್ದಾರೆ.
  • ಸ್ಟ್ರಕ್ಚರಲ್ ಡೈನಾಮಿಕ್ಸ್ ಹಾಗೂ ಕಂಟ್ರೋಲ್, ಡೈನಾಮಿಕ್ ಅನಾಲಿಸಿಸ್ ಆಫ್ ಸಪರೇಷನ್ ಮೆಕಾನಿಸಮ್, ವೈಬ್ರೇಷನ್ ಮತ್ತು ಅಕೌಸ್ಟಿಕ್ ಟೆಸ್ಟಿಂಗ್,ಉಡಾವಣಾ ವಾಹನಗಳ ವಿನ್ಯಾಸ ಮತ್ತು ಉಡಾವಣಾ ಸೇವೆಗಳ ನಿರ್ವಹಣೆ ಕುರಿತು ಅನೇಕ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.
- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!