ಮಹಿಳೆಯರ ಪ್ರವೇಶ ತಡೆ ಆದೇಶ ಹಿಂಪಡೆದ ಜಮಾ ಮಸೀದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿ ಜಮಾ ಮಸೀದಿಯ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸುವ ಆದೇಶವನ್ನು ಹಿಂತೆಗೆದುಕೊಳ್ಳಲು ಒಪ್ಪಿಕೊಂಡಿದ್ದಾರೆ.

ಇಂದು ಮಧ್ಯಾಹ್ನ ಜಾರಿಯಾದ ನಿಯಮದಲ್ಲಿ, ಜಾಮಾ ಮಸೀದಿ ಆಡಳಿತವು ಪುರುಷ ಸಹಚರರಿಲ್ಲದ ಹೆಣ್ಣು ಮತ್ತು ಹುಡುಗಿಯರ ಪ್ರವೇಶವನ್ನು ನಿಷೇಧಿಸಿತ್ತು.

ಬಳಿಕ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಜಾಮಾ ಮಸೀದಿಯ ಶಾಹಿ ಇಮಾಮ್ ಬುಖಾರಿ ಅವರೊಂದಿಗೆ ಮಾತನಾಡಿದ್ದು, ಜಾಮಾ ಮಸೀದಿಗೆ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸುವ ಆದೇಶವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೀಗಸಂದರ್ಶಕರು ಮಸೀದಿಯ ಪಾವಿತ್ರ್ಯತೆಯನ್ನು ಗೌರವಿಸಬೇಕು ಮತ್ತು ಕಾಪಾಡಬೇಕು ಎಂಬ ವಿನಂತಿಯೊಂದಿಗೆ ಆದೇಶವನ್ನು ಹಿಂಪಡೆಯಲು ಒಪ್ಪಿಕೊಂಡಿದ್ದಾರೆ.

ಜಾಮಾ ಮಸೀದಿಗೆ ಮಹಿಳೆಯರ ನಿಷೇಧವನ್ನು ಖಂಡಿಸಿ ಬಿಜೆಪಿ ಸೇರಿದಂತೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ವಾಗ್ದಾಳಿ ನಡೆಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!