Jamboree Special | ಮೋಡಿ ಮಾಡುವ ಜಾದೂ ಕಂಡು ಖುಷಿಪಟ್ಟ ಸ್ಕೌಟ್ ಗೈಡ್ಸ್‌ನ ಮಕ್ಕಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿಯಲ್ಲಿ ಮೇಳೈಸಿರುವ ‘ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ’ಯಲ್ಲಿ ಮಕ್ಕಳನ್ನು ಬಲು ಬೇಗನೆ ಸೆಳೆದ ಕ್ಷಣವೆಂದರೆ ಅದು ಜಾದೂ .
ದೇಶ ವಿದೇಶದ ಖ್ಯಾತಿಯ ಆಯ್ದ ಹೆಸರಾಂತ ಜಾದೂಗಾರರು ತಮ್ಮ ಕೈ ಚಳಕದ ಮೂಲಕ ಜಾದೂ ಪ್ರದರ್ಶನ ನೀಡುತ್ತಿದ್ದಾರೆ.
ದಿನಕ್ಕೆ ಮೂರು ಪ್ರದರ್ಶನ ನೀಡುತ್ತಾ ತಂಡ ತಂಡವಾಗಿ ಈ ಪ್ರದರ್ಶನದಲ್ಲಿ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ. ವಿದ್ಯಾಗಿರಿಯ ವಿವಿಧ ಕಡೆಗಳಲ್ಲಿ ಈ ಜಾದೂ ಪ್ರದರ್ಶನ ನಡೆಯುತ್ತಿದ್ದು ವಿದ್ಯಾರ್ಥಿಗಳು ಮೂಕ ವಿಸ್ಮಿತರಾಗುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!