Jamboree Special | ಇದು ಬಗೆದಷ್ಟೂ ಹೊಸ ಹೊಸತನ ಸಿಗುವ ಅನರ್ಘ್ಯ ಜಾಂಬೂರಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಮೂಡುಬಿದಿರೆಯಲ್ಲಿ ದೇಶದ ಮೊಟ್ಟಮೊದಲ, ಅಂತಾರಾಷ್ಟ್ರೀಯ ಮಟ್ಟದ ೨೫ನೇ ಸ್ಕೌಟ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಯಶಸ್ವಿಯಾಗಿ ನಡೆಯುತ್ತಿದ್ದು, ದೇಶ ವಿದೇಶಗಳಿಂದ ಜನರು ಆಗಮಿಸುತ್ತಿದ್ದಾರೆ.

ಇಲ್ಲಿನ ವ್ಯವಸ್ಥೆ, ನಾನಾ ಕಾರ್ಯಕ್ರಮ ಬಂದವರಲ್ಲಿ ಖುಷಿ ನೀಡುತ್ತಿದೆ. ಆದ್ರೆ ಎಲ್ಲವನ್ನು ವೀಕ್ಷಿಸಲು ಒಂದು ದಿನದಲ್ಲಿ ಸಾಧ್ಯವೇ ಇಲ್ಲ.
ಹೌದು, ದೇಶದಲ್ಲಿ ಮೊದಲ ಬಾರಿಗೆ ಆಯೋಜನೆಗೊಂಡ ಜಾಂಬೂರಿಯಲ್ಲಿ ಒಂದೊಂದು ಮೇಳಗಳನ್ನು ನೋಡಲೂ, ಅದನ್ನು ಅನುಭವಿಸಲೂ ಒಂದೊಂದು ದಿನವೇ ಬೇಕು.

ಯಾಕೆಂದರೆ ಅಲ್ಲಿದೆ ಅರಣ್ಯ ಇಲಾಖೆಯ ಶೋಲಾ ಕಾಡು, ಆಹಾರ ಮಳಿಗೆಗಳು, ಕರಕುಶಲ ಮಳಿಗೆಗಳು, ನಾನಾ ವಿಭಿನ್ನ ಮಳಿಗೆಗಳು. ಅಷ್ಟೇಅಲ್ಲದೆ ಪುಷ್ಪಮೇಳ ನೋಡುವುದೇ ಒಂದು ಹಬ್ಬ. ಮತ್ತೊಂದೆಡೆ ಸಂಗೀತ, ನೃತ್ಯದ ಸಂಭ್ರಮ. ಎಲ್ಲವೂ ಮನ ಮನಗಳಿಗೆ ಇಂಪನ್ನು ನೀಡುತ್ತಿದೆ.


ಹಗಲಲ್ಲಿ ಜಾಂಬೂರಿಯ ವೈಭವ ಒಂದು ರೀತಿಯಾದರೆ ರಾತ್ರಿಯ ಲೋಕವೇ ಮತ್ತೊಂದು. ಬೆಳಕಿನ ಚಿತ್ತಾರದ ವರ್ಣವೈಭವದ ವೀಕ್ಷಣೆಗೆ ಎರಡು ಕಣ್ಣುಗಳು ಸಾಲದು. ಸಣ್ಣ ಮಕ್ಕಳ ಪಾಲಿಗೆ ಇದೊಂದು ಜಾತ್ರೆಯಾದರೆ, ವಿದ್ಯಾರ್ಥಿಗಳಿಗೆ ಹಬ್ಬದ ಸಡಗರ, ಪ್ರೌಢ ವ್ಯಕ್ತಿಗಳಿಗೆ ಇದೊಂದು ಅನುಭವ ಪಡೆದುಕೊಳ್ಳುವ ಅವಕಾಶ. ಪ್ರತಿಯೊಂದು ವಯೋಮಾನದವರೂ ಇಷ್ಟಪಡುವ, ಆಸ್ವಾದಿಸುವ, ಅನುಭವಿಸುವ ಬಗೆದಷ್ಟೂ ಹೊಸ ಹೊಸತನ್ನು ಒದಗಿಸಿಕೊಡುವ ಅನರ್ಘ್ಯ ಜಾಂಬೂರಿ ಇದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!