ಬೆಂಗಳೂರು-ಗೋವಾ ನಡುವೆ ಹಾರಾಡಲು ಸಿದ್ಧವಾಗುತ್ತಿದೆ ಆಕಾಶ್ ಏರ್​ ಲೈನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಜನವರಿ 11 ರಿಂದ ವಿಮಾನಯಾನ ಸಂಸ್ಥೆ ಆಕಾಶ್ ಏರ್​ ಬೆಂಗಳೂರು ಹಾಗೂ ಗೋವಾ ಮಧ್ಯೆ ಸೇವೆ ಆರಂಭಿಸಲಿದೆ.

ಪ್ರತಿ ದಿನ ಎರಡು ವಿಮಾನಗಳು ಉಭಯ ನಗರಗಳ ಮಧ್ಯೆ ಹಾರಾಟ ನಡೆಸಲಿವೆ. ಫೆಬ್ರವರಿ 1ರಿಂದ ಮತ್ತೊಂದು ವಿಮಾನ ಹಾರಾಟ ನಡೆಸಲಿದೆ.

ಗೋವಾ, ಬೆಂಗಳೂರು ನಡುವೆ ಪ್ರತಿ ದಿನ ಎರಡು ವಿಮಾನಗಳು ಸಂಚರಿಸಲಿದ್ದು, ಫೆಬ್ರವರಿ 1ರಿಂದ ಮೂರು ವಿಮಾನಗಳು ಸಂಚರಿಸಲಿವೆ ಎಂದು ವಿಮಾನಯಾನ ಕಂಪನಿ ಇತ್ತೀಚೆಗೆ ಘೋಷಿಸಿತ್ತು.

ಈ ಸೇವೆಯಿಂದ ಪ್ರವಾಸೋದ್ಯಮಕ್ಕೆ ಪ್ರಯೋಜನವಾಗಲಿದೆ. ಆರ್ಥಿಕ ಬೆಳವಣಿಗೆಗೂ ಉಪಕಾರಿಯಲಿದೆ.

ಗೋವಾದ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಗೋವಾ ಹಾಗೂ ಮುಂಬೈ ನಡುವೆ ಕೂಡ ಜನವರಿ 11ರಿಂದ ಹೊಸ ವಿಮಾನಯಾನ ಸೇವೆ ಆರಂಭಗೊಳ್ಳಲಿದೆ.

ಇತ್ತ ಆಕಾಶ್ ಏರ್​ ಡಿಸೆಂಬರ್ ಅಂತ್ಯದ ವೇಳೆಗೆ ವಾರಕ್ಕೆ 500ರಂತೆ ವಿಮಾನ ಹಾರಾಟದ ಗುರಿ ಹೊಂದಿರುವುದಾಗಿ ತಿಳಿಸಿತ್ತು. 12 ನಗರಗಳ ಮಧ್ಯೆ 18 ಮಾರ್ಗಗಳ ಮೂಲಕ ವಿಮಾನ ಹಾರಾ ನಡೆಸುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!