ಅಪ್ಪು ನಟನೆಯ ʼಜೇಮ್ಸ್‌ʼ ಸಿನಿಮಾ ರಿಲೀಸ್‌ ಗೆ ಸಜ್ಜು: ಚಿತ್ರಮಂದಿರಗಳ ಪಟ್ಟಿ ಬಿಡುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಟ ಪುನೀತ್‌ ರಾಜ್‌ ಕುಮಾರ್‌ ಅವರ ನಟನೆಯ ಕೊನೆಯ ಚಿತ್ರ ಜೇಮ್ಸ್‌ ರಿಲೀಸ್‌ ಗೆ ಸಜ್ಜಾಗುತ್ತಿದೆ. ಸಿನಿಮಾ ಬಿಡುಗಡೆಗಾಗಿ ಅಪ್ಪು ಅಭಿಮಾನಿಗಳು ಕಾದುಕೂತಿದ್ದಾರೆ.
ಮಾ.17, ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಹುಟ್ಟು ಹಬ್ಬದ ದಿನದಂದು ಜೇಮ್ಸ್‌ ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರತಂಡ ಮೊದಲ ಹಂತದ ಚಿತ್ರಮಂದಿರಗಳ ಪಟ್ಟಿ ರಿಲೀಸ್‌ ಮಾಡಿದೆ.
ಬೆಂಗಳೂರಿನಲ್ಲಿ ಕೆಜಿ ರಸ್ತೆಯಲ್ಲಿರುವ ತ್ರಿವೇಣಿ, ವಿಜಯನಗರದಲ್ಲಿರುವ ವೀರೇಶ್, ಪ್ರಸನ್ನ, ವೀರಭದ್ರೇಶ್ವರ, ಅಂಜನ್ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.
ಮಲ್ಟಿಪ್ಲೆಕ್ಸ್‌ಗಳನ್ನು ಹೊರಪಡಿಸಿ, ಕೇವಲ ಸಿಂಗಲ್ ಸ್ಕ್ರೀನ್‌ನಲ್ಲಿಯೇ 130ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆಸ್ಟ್ರಿಯಾ, ಬೆಲ್ಜಿಯಂ, ಡೆನ್ಮಾರ್ಕ್, ಫ್ರಾನ್ಸ್, ಜರ್ಮನಿ, ಇಟಲಿ, ಲಕ್ಸೆಂಬರ್ಗ್, ನೆದರ್‌ಲ್ಯಾಂಡ್, ನಾರ್ವೆ, ಪೊಲ್ಯಾಂಡ್ ಹಾಗೂ ಸ್ವೀಡನ್‌ನಲ್ಲಿ ಜೇಮ್ಸ್‌ ಬಿಡುಗಡೆಯಾಗಲಿದೆ.
ಯುರೋಪ್‌ ಒಂದರಲ್ಲೇ ಸಮಾರು 33 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!