ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿ ಏ.13 ರಿಂದ ಜನಾಂದೋಲನ

ಹೊಸದಿಗಂತ ವರದಿ, ಬಾಗಲಕೋಟೆ
ಬೀಳಗಿಯ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆಯಿಂದ ಕೃಷ್ಣಾ, ಮಹಾದಾಯಿ, ನವಲಿ ಸಂಕಲ್ಪ ಯಾತ್ರೆಯನ್ನು ಹಾಗೂ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ, ಅಸಮಾನತೆ ಹೋಗಲಾಡಿಸಲು ಏ.13 ರಿಂದ 17 ರವರೆಗೆ ಟ್ರ್ಯಾಕ್ಟರ್ ಗಳ ಮೂಲಕ ಮೂಲಕ ಜನಾಂದೋಲನ ನಡೆಯಲಿದೆ ಎಂದು ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಪ್ರತಿಪಕ್ಷದ ಮಾಜಿ ನಾಯಕ ಎಸ್.ಆರ್.ಪಾಟೀಲ ತಿಳಿಸಿದರು.
ನವನಗರದ ಪತ್ರಿಕಾಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ‌ ಅವರು, ನರಗುಂದದಿಂದ ಏ.13 ರಂದು ಆರಂಭಗೊಳ್ಳುವ ಟ್ರ್ಯಾಕ್ಟರ್‌ ಜಾಥಾ 108 ಗ್ರಾಮಗಳಲ್ಲಿ ಜನಾಂದೋಲನ ಹೋರಾಟ ನಡೆಯಲಿದೆ ಎಂದರು.
ಸಮಾರೋಪ ಏಪ್ರಿಲ್ 17 ರಂದು ಬೀಳಗಿ ತಾಲೂಕಿನ ಬಾಡಗಂಡಿಯ ಬಾಪೂಜಿ ಅಂತರಾಷ್ಟ್ರೀಯ ಶಾಲೆಯ ಆವರಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಈ‌ಹೋರಾಟ ಯಾವುದೇ ವ್ಯಕ್ತಿ, ಪಕ್ಷದ ವಿರುದ್ಧ ಅಲ್ಲ, ಇದೊಂದು ಉತ್ತರ ಕರ್ನಾಟಕ ಹಕ್ಕಿಗಾಗಿ, ಉತ್ತರ ಕರ್ನಾಟಕ ನೀರಾವರಿ ಯೋಜನೆ‌ ಶೀಘ್ರ ಅಭಿವೃದ್ಧಿ ಮಾಡಲು ಹೋರಾಟ ನಡೆಯಲಿದೆ ಎಂದು ತಿಳಿಸಿದರು.
ಉತ್ತರ ಕರ್ನಾಟಕ ನೀರಾವರಿ ಯೋಜನೆಯನ್ನು ಸರ್ಕಾರ ಶೀಘ್ರ ಪೂರ್ಣಗೊಳಿಸಬೇಕು. ವಿಳಂಭ ಮಾಡಬಾರದು ಎಂದು ಈ ಹೋರಾಟ ಆಯೋಜಿಸಲಾಗಿದೆ ಎಂದು ಹೇಳಿದರು. ಮಾಜಿ ಸಚಿವ ಅಜಯಕುಮಾರ ಸರನಾಯಕ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!