Monday, October 2, 2023

Latest Posts

VIRAL VIDEO| ’ಸಾರ್..ನಮ್ಮ ಮಗುವನ್ನು ಎತ್ತಿಕೊಳ್ಳಿ’, ಅಂಧಾಭಿಮಾನದಲ್ಲಿದ್ದ ತಂದೆಗೆ ಮಗು ಅಳು ಕೇಳಿಸದೆ ಹೋಯ್ತಲ್ಲಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಿನಿಮಾ ಹೀರೋಗಳಿಗೆ ಅಭಿಮಾನಿಗಳೇನು ಕಮ್ಮಿಯಿಲ್ಲ. ಅಭಿಮಾನಿಗಳೂ ಅಷ್ಟೇ ತಮ್ಮ ನೆಚ್ಚಿನ ನಟ ಕಂಡರೆ ಅಪ್ಪುಗೆ, ಆಟೋ ಗ್ರಾಫ್‌, ಕೈಕುಲುಕಿಸಲು ನೂಕು ನುಗ್ಗಲಿದ್ದರೂ ಸರಿಯೇ ಮುಂದಾಗುತ್ತಾರೆ. ಆದರೆ ಅಭಿಮಾನ ಕುರುಡಾದರೆ, ಈ ದೃಶ್ಯದಲ್ಲಿರುವಂತೆ ಆಗುತ್ತದೆ. ಮಗು ಅಳುತ್ತಿದರೂ ಈ ತಂದೆಗೆ ನಟ ತನ್ನ ಮಗುವನ್ನು ಎತ್ತಿಕೊಳ್ಳಬೇಕು ಎಂಬುದಷ್ಟೇ ಗಮನ.

ಪವರ್ ಸ್ಟಾರ್ ಪವನ್ ಕಲ್ಯಾಣ್ ಪ್ರಸ್ತುತ ವಾರಾಹಿ ಯಾತ್ರೆಯ ಭಾಗವಾಗಿ ವಿಶಾಖ ಜಿಲ್ಲೆಯ ವಿಮಾನ ನಿಲ್ದಾಣದಕ್ಕೆ ಬಂದಿಳಿದರು. ಈ ಸಂದರ್ಭದಲ್ಲಿ ನಿಲ್ದಾಣದ ಆಚೆ ನಿಂತಿದ್ದ ಜನ ಪವನ್‌ ನೋಡುತ್ತಿದ್ದಂತೆ ಜನಸೇನಾ ಘೋಷಣೆಗಳನ್ನು ಕೂಗಿ ನಟನತ್ತ ಮುಗಿಬಿದ್ದರು. ಈ ಕ್ರಮದಲ್ಲಿ ಒಬ್ಬ ತಂದೆ ತನ್ನ ಮಗುವನ್ನು ನಟನ ಕೈಯಲ್ಲಿಡಲು ಯತ್ನಿಸಿದ್ದಾನೆ. ಮಗು ಅಳುತ್ತಿದ್ದರೂ ಕ್ಯಾರೆ ಅನ್ನದೆ ನೂಕು ನುಗ್ಗಲಿನಲ್ಲಿ ಮಗುವನ್ನು ಎಳೆದಾಡಿದರು. ಪವನ್‌ ಕಲ್ಯಾಣ್‌ ಕೂಡ ಬೇಕಾಬಿಟ್ಟಿ ಮಗುವನ್ನು ಮುಟ್ಟಿ ಮುಂದೆ ನಡೆದಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ನಟ-ಪೋಷಕರು ಇಬ್ಬರೂ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.

ಪುಟ್ಟ ಮಗುವಿನ ಬಗ್ಗೆ ಕನಿಕರವಿಲ್ಲ ಎಂದು ನಟನನ್ನು ಟೀಕಿಸುತ್ತಿದ್ದರೆ, ಹೆತ್ತವರಿಗೆ ಮಗುವಿನ ಬಗ್ಗೆ ಚಿಂತೆಯೇ ಇಲ್ಲ..ಇಷ್ಟು ಅಳುತ್ತಿದ್ದರೂ ಇಂತಹ ಸಾಹಸ ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!