Tuesday, October 3, 2023

Latest Posts

BOLLYWOOD| ತನ್ನ ಮೊದಲ ಲವ್ ಬ್ರೇಕಪ್‌ಗೆ ಕಾರಣ ತಿಳಿಸಿದ ನಟಿ ಜಾನ್ವಿ ಕಪೂರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶ್ರೀದೇವಿಯ ಮುದ್ದು ಮಗಳು ಜಾಹ್ನವಿ ಕಪೂರ್ ಸಿನಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ತನಗೊಂದು ವಿಶೇಷ ಗುರುತು ಸಿಗಬೇಕೆಂದು ನಾನಾ ಪ್ರಯತ್ನಗಳನ್ನು ಮಾಡಿದರೂ ಯಾಕೋ ಅವರ ನಸೀಬೇ ಸರಿ ಇಲ್ಲ ಅನಿಸುತ್ತಿದೆ. ಜಾನ್ವಿ ಶ್ರೀದೇವಿಯಂತೆ ಗ್ಲಾಮರ್ ಕ್ವೀನ್‌ನಂತೆ ಕಾಣುತ್ತಿದ್ದಾರೆ. ಇದೀಗ ಜಾನ್ವಿ ಅಭಿನಯದ ʻಬವಾಲ್ ʼ ಚಿತ್ರಮಂದಿರಗಳಲ್ಲಿ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿದೆ. ಈ ಸಿನಿಮಾ ಕುರಿತು ಸಂದರ್ಶನ ನೀಡುವ ವೇಳೆ ಈ ಬೆಡಗಿ ತನ್ನ ಮೊದಲ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

ಸ್ವೈಪ್ ರೈಡ್ ಎಂಬ ಟಾಕ್ ಶೋನಲ್ಲಿ ಭಾಗವಹಿಸಿದ್ದ ಜಾನ್ವಿ ತನ್ನ ಮೊದಲ ಪ್ರೀತಿಯ ಬ್ರೇಕಪ್‌ ಬಗ್ಗೆ ಬಾಯ್ಬಿಟ್ಟಿದ್ದಾರೆ. ಯಾರನ್ನೂ ಪ್ರೀತಿಸದಂತೆ ಎಂದು ತಂದೆ-ತಾಯಿ ಆಗಾಗ ಹೇಳುತ್ತಿದ್ದರು ಎಂದ ಜಾನ್ವಿ.. ತನ್ನ ಮೊದಲ ಬಾಯ್‌ಫ್ರೆಂಡ್ ಜೊತೆ ಬ್ರೇಕ್ ಅಪ್ ಆಗಲು ಮುಖ್ಯ ಕಾರಣ ʻಸುಳ್ಳುʼ ಎಂದರು.

ಮೊದಲ ಸಲ ಸೀರಿಯಸ್ ಆಗಿ ಲವ್ ಮಾಡಿದ್ದೆ. ಆ ಸಮಯದಲ್ಲಿ ತಂದೆ-ತಾಯಿಗೆ ಸಾಕಷ್ಟು ಸುಳ್ಳುಗಳನ್ನು ಹೇಳಬೇಕಾಗಿತ್ತು. ಇದಲ್ಲದೆ, ತನ್ನ ಗೆಳೆಯ ಮತ್ತು ತನ್ನ ನಡುವೆ ಅನೇಕ ಸುಳ್ಳಿನ ಸರಮಾಲೆ ಇದ್ದವು. ಅಪ್ಪ-ಅಮ್ಮನಿಗೆ ಸದಾ ಸುಳ್ಳುಗಳನ್ನು ಹೇಳೋಕಾಗದೆ ಬ್ರೇಕಪ್‌ ಮಾಡಿಕೊಂಡಿದ್ದಾಗಿ ಜಾನ್ವಿ ಹೇಳಿದ್ದಾರೆ.

ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ಈ ಮದ್ದುಗುಮ್ಮ ಎನ್ ಟಿಆರ್ ನಾಯಕನಾಗಿ ತಯಾರಾಗುತ್ತಿರುವ ದೇವರ ಚಿತ್ರದಲ್ಲಿ ನಾಯಕಿಯಾಗಿ ಸದ್ದು ಮಾಡಲಿದ್ದಾರೆ. ಈಗಾಗಲೇ ಈ ಸಿನಿಮಾದಿಂದ ಬಿಡುಗಡೆಯಾಗಿರುವ ಜಾನ್ವಿ ಪೋಸ್ಟರ್ ಆಕರ್ಷಕವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!